ಮಾಸ್ಕ್ ಇಲ್ಲದೇ ತಿರುಗಾಡಿದ 403 ಜನರಿಗೆ ದಂಡ ವಿಧಿಸಿದ ಪೊಲೀಸರು..!

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಮಾಸ್ಕ್ ಇಲ್ಲದೇ ತಿರುಗಾಡಿದ ವಾಹನ ಸವಾರರಿಗೆ ಸ್ಥಳೀಯ ಪೊಲೀಸರು ದಂಡ ವಿಧಿಸಿದ್ದಾರೆ. ಒಟ್ಟು 403 ವಾಹನ ಸವಾರರ ವಿರುದ್ದ ಪ್ರಕರಣ ದಾಖಲಿಸಿ 40,300 ರೂಪಾಯಿ ದಂಡ ವಿಧಿಸಲಾಗಿದೆ.ಅಷ್ಟೇ ಅಲ್ಲದೇ ಕಾಯ್ದೆ ಉಲ್ಲಂಘಿಸಿದ ಅಂಗಡಿ ಮಾಲೀಕರಿಗೂ ಹಾಗೂ ಪ್ರಯಾಣಿಕರಿಗೂ ದಂಡ ವಿಧಿಸಲಾಗಿದೆ.ಇದಲ್ಲದೇ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ 23 ಪ್ರಕರಣ ದಾಖಲಿಸಿ 8600 ರೂ.ದಂಡ ವಿಧಿಸಲಾಗಿದೆ. ಸಿಪಿಐ ಮಹಾಂತೇಶ ಸಜ್ಜನ ಹಾಗೂ ಪಿಎಸ್ಐ ಪ್ರಕಾಶ್ ಡಂಬಳ ನೇತೃತ್ವದಲ್ಲಿ ಮಾಸ್ಕ್ ಇಲ್ಲದೇ ತಿರುಗಾಡುವ ಪ್ರತಿಯೊಬ್ಬರಿಗೂ ದಂಡ ವಿಧಿಸಲಾಗಿದೆ.

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Please follow and like us:

Related posts

Leave a Comment