ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಿರಿ ನಾಳೆ ನಿರ್ಣಯ..!

ಮಳವಳ್ಳಿ: ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಿರಿ ಚುನಾವಣೆ ನಾಳೆ ನಡೆಯಲಿದ್ದು ಬಹುತೇಕ ಕಾಂಗ್ರೆಸ್ ಪಾಲಾಯಾಗಲಿದೆ. ಕಳೆದ ತಿಂಗಳ ಸೆ 30 ರಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅದರಲ್ಲಿ 11 ಮಂದಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಜಯಶೀಲರಾಗಿದ್ದು ಕೇವಲ 2 ಮಂದಿ ಜೆಡಿಎಸ್ ಬೆಂಬಲಿತರು ಮಾತ್ರ ಜಯಶೀಲಯಾಗಿದ್ದರು. ಇನ್ನೂ ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ರವರು ನೇತೃತ್ವದಲ್ಲಿ ಎಲ್ಲಾ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಸೇರಿ ಒಮ್ಮತವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಆಯ್ಕೆಯಾಗಲಿದ್ದು, ಬಹುತೇಕವಾಗಿ ಅಧ್ಯಕ್ಷರಾಗಿ ಕಸಬಾ ಹೋಬಳಿ ಹಿರಿಯ ಕಾಂಗ್ರೇಸ್ ಮುಖಂಡ ಕುಳ್ಳಚನ್ನಂಕಯ್ಯರು, ಹಾಗೂ ಉಪಾಧ್ಯಕ್ಷರಾಗಿ ಬಿಜಿಪುರ ಹೋಬಳಿಯ ಕುಮಾರ್ ರವರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಇಂದು ಮಾಜಿ ಸಚಿವ. ಪಿ.ಎಂ ನರೇಂದ್ರಸ್ವಾಮಿ ರವರ ನಿವಾಸದಲ್ಲಿ ಸಭೆ ನಡೆದಿದ್ದು. ಎಲ್ಲಾ 11 ಮಂದಿ ನಿರ್ದೇಶಕರು ಸೇರಿಸಿ ಮಾತುಕತೆ ನಡೆದಿರುವ ಬಗ್ಗೆ ಕಾಂಗ್ರೆಸ್ ಮೂಲಗಳು ತಿಳಿಸಿದೆ. ಒಟ್ಟಿನಲ್ಲಿ ಈ ಚುನಾವಣೆ ಸ್ಥಳೀಯ ಸಂಸ್ಥೆಯ ಪಕ್ಷವಿಲ್ಲದ ಚುನಾವಣೆಯಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪತ್ರಿಷ್ಠೆಯ ಚುನಾವಣೆಯಾಗಲಿದೆ .

ವರದಿ-ಎ.ಎನ್ ಲೋಕೇಶ್ ಎಕ್ಸ್ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment