ಇದೇ ಕಾರಣಕ್ಕೆ ಜೈಲಿನಲ್ಲಿ ಕಿತ್ತಾಡಿದ್ದಾರಂತೆ ರಾಗಿಣಿ- ಸಂಜನಾ..!

ಬೆಂಗಳೂರು: ರಾಗಿಣಿ ಮತ್ತು ಸಂಜನಾರ ದಿನನಿತ್ಯದ ಕಿತ್ತಾಟದಿಂದ ಜೈಲು ಸಿಬ್ಬಂದಿಗೆ ಮತ್ತು ಇತರೆ ಕೈದಿಗಳಿಗೆ ತಲೆನೋವು ಶುರುವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ, ನಶೆರಾಣಿಯರ ಜಗಳಕ್ಕೆ ಜೈಲಿಗೆ ಜೈಲೇ ಕಂಗಾಲಾಗಿ ಹೋಗಿದೆಯಂತೆ. ದಿನ ಬೆಳಗಾದ್ರೆ ಸಾಕು ಇಬ್ಬರ ಕಿತ್ತಾಟ ಪ್ರಾರಂಭ, ಚಿಕ್ಕ ಮಕ್ಕಳಂತೆ ಸಣ್ಣ ಪುಟ್ಟ ವಿಚಾರಗಳಿಗೆ ಇಬ್ಬರೂ ನಾಯಿ- ನರಿಗಳಂತೆ ಕಿತ್ತಾಡುತ್ತಾ,ಒಬ್ಬರ ಮೇಲೆ ಮತ್ತೊಬ್ಬರು ಸಾಲು ಸಾಲು ಆರೋಪ ಮಾಡ್ತಿದ್ದಾರಂತೆ. ಇದರಿಂದ ಜೈಲು ಸಿಬ್ಬಂದಿಯ ನೆಮ್ಮದಿ ಹಾಳಾಗಿದೆ ಜೊತೆಗೆ ಇತರೆ ಕೈದಿಗಳಿಗೂ ಸಿಕ್ಕಾಪಟ್ಟೆ ತಲೆಬಿಸಿಯಾಗಿದ್ದು ಇಬ್ಬರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ ಅಂತಾ ಜೈಲಿನಲ್ಲಿರುವ ಇತರರು ಚಡಪಡಿಸುತ್ತಿದ್ದಾರಂತೆ. ಆರಂಭದಲ್ಲಿ ನಟಿಯರೆಂದು ಗೌರವಿಸಿದ್ದ ಸಿಬ್ಬಂದಿ, ಕೈದಿಗಳು ಇದೀಗ ಯಪ್ಪಾ ರಾಗಿಣಿನಾ ಮತ್ತು ಸಂಜನಾನಾ ಸಹವಾಸ ಬೇಡಪ್ಪಾ ಅಂತಿದ್ದಾರಂತೆ. ಇನ್ನು ನಿನ್ನೆವರೆಗೂ ಒಂದೇ ಸೆಲ್ ನಲ್ಲಿದ್ದ ನಟಿಯರ ಪೈಕಿ ರಾಗಿಣಿಗೆ ಪುಸ್ತಕ ಓದೋದು, ಟಿವಿ ನೋಡೋದು ದಿನ ನಿತ್ಯದ ಚಟುವಟಿಕೆಯಾದರೆ, ಬೆಳಗ್ಗೆ ಎದ್ದು ಯೋಗ ಮಾಡೋದು ಸಂಜನಾ ಗಲ್ರಾನಿ ದಿನಚರಿ. ಜೊತೆಗೆ, ಸಂಜನಾ ಜೈಲಲ್ಲಿರೋ ಪುಟ್ಟ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ, ಸಂಜನಾ ಬೆಳ್ಳಂಬೆಳಗ್ಗೆ ಸೆಲ್ ಲೈಟ್ ಹಾಕಿ ಯೋಗ ಮಾಡ್ತಾಳೆ ಅಂತಾ ತುಪ್ಪದ ಹುಡುಗಿಗೆ ಸಿಟ್ಟು.ನನ್ನನ್ನು ನೆಮ್ಮದಿಯಾಗಿ ಮಲಗೋಕೆ ಬಿಡ್ತಿಲ್ಲ ಅಂತಾ ಜೈಲರ್ ಮುಂದೆ ಕಂಪ್ಲೇಂಟ್ ಹೇಳಿದ್ದಾಳೆ.ಇತ್ತ, ರಾಗಿಣಿ ರಾತ್ರಿಯೆಲ್ಲಾ ಲೈಟ್ ಹಾಕಿರ್ತಾಳೆ ಅಂತಾ ಸಂಜನಾ ದೂರುತ್ತಾಳಂತೆ.ಮಲಗೋದು ಬಿಟ್ಟು ಪುಸ್ತಕ ಓದಿಕೊಂಡು ಕಿರಿಕಿರಿ ಮಾಡ್ತಿದ್ದಾಳೆ ಅನ್ನೋದು ಸಂಜನಾ ಕಂಪ್ಲೇಂಟ್. ಇಷ್ಟೇ ಅಲ್ಲದೆ ಸಣ್ಣಸಣ್ಣ ವಿಚಾರಗಳಿಗೂ ಕಂಪ್ಲೇಂಟ್ ಮಾಡಿ ಇಬ್ಬರೂ ಕಿತ್ತಾಡ್ತಾರಂತೆ. ಜೈಲಿಗೆ ಬರೋಕೆ ನೀನು ಕಾರಣ, ಅವನಿಂದಲೇ ನಾನು ಈ ಪರಿಸ್ಥಿತಿಗೆ ಬಂದೆ ಎಂದು ಪರಸ್ಪರ ಆರೋಪ ಮಾಡಿಕೊಂಡು ರಂಪಾಟ ಮಾಡ್ತಿದ್ದಾರಂತೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment