ಕೋವಿಡ್-19 ಮಾಸುವ ಮುನ್ನವೇ ಜನ್ರಿಗೆ ಮತ್ತೊಂದು ಶಾಕ್- ದೇಶಕ್ಕೆ ಎಂಟ್ರಿಯಾಗ್ತಿದೆ ಮತ್ತೊಂದು ಡೆಡ್ಲಿ ವೈರಸ್.!

ಬೆಂಗಳೂರು: ಕೊರೊನಾ ಮಹಾಮಾರಿಯ ಕಾಟ ಇನ್ನೂ ತಪ್ಪಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಾನೇ ಇದೆ. ಈ ಸೋಂಕಿಗೆ ಅದೇಷ್ಟೋ ಜನ್ರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕೊರೊನಾ ಸೋಕಿನಿಂದ ಚೇತರಿಸಿಕೊಳ್ಳುವ ಮುನ್ನವೇ ಜನರಿಗೆ ಈಗ ಮತ್ತೊಂದು ಶಾಕ್ ಕಾದಿದೆ. ಎಸ್, ಕೊರೊನಾ ಎಂಬಾ ಮಹಾಮಾರಿ ಇಡೀ ದೇಶವನ್ನೇ ತಲ್ಲಣಿಸಿದೆ, ಇನ್ನೂ ಈ ಭಯಾನಕ ವೈರಸ್ ನಿಂದ ಜನರು ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಡೆಡ್ಲಿ ವೈರಸ್ ಪತ್ತೆಯಾಗಿದೆ. ದಕ್ಷಿಣ ಕೊರಿಯಾದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗಿದೆ. ಈ ವೈರಸ್ಗೆ ಅಲ್ಲಿನ ಗ್ಯಾಂಗ್ವಾನ್ ಪ್ರಾಂತ್ಯದಲ್ಲಿರುವ ಜಮೀನೊಂದರಲ್ಲಿ ಮೂರು ಹಂದಿಗಳು ಬಲಿಯಾಗಿವೆ. ಇನ್ನು ಈ ಮೂರು ಹಂದಿಗಳು ಬಲಿಯಾದ ಬೆನ್ನಲ್ಲೇ ಅಲ್ಲಿನ ಅಧಿಕಾರಿಗಳು ಸುಮಾರು 1500 ಹಂದಿಗಳನ್ನು ಕೊಂದಿದ್ದಾರೆ ಎನ್ನಲಾಗಿದೆ. ಈ ವೈರಸ್ ಹಂದಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ತೀರಾ ಕಡಿಮೆ ಇದ್ದರೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೆಯೇ ಈ ವೈರಸ್ ಹಂದಿಗಳಿಂದ ಹಂದಿಗಳಿಗೆ ವೇಗವಾಗಿ ಹರಡಬಹುದು ಎಂತಲೂ ಅಂದಾಜಿಸಲಾಗಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment