ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಬೈಕ್ ಕಳ್ಳರು..!

ಆಳಂದ: ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಬೈಕ್ ಕಳ್ಳರನ್ನು ಆಳಂದ ತಾಲೂಕಿನ ನಿಂಬರ್ಗಾ ಠಾಣೆ ಪೊಲೀಸರು ಬಂಧಿಸಿ, ಸುಮಾರು 11 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಸೋಮಲಿಂಗ ಕೊಂಬಿನ, ಶಿವಾನಂದ ಧಾನಪ್ಪ ಪೆಡಗಾ,ಧೀಲಿಪ್ ಶಿವಶರಣಪ್ಪ ದೊಡ್ಡಮನಿ ಎಂಬ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಕಲಬುರಗಿ ಎಸ್.ಪಿ ಮರಿಯಮ್ಮ ಜಾರ್ಜ್, ಎಸ್.ಪಿ.ಪ್ರಸನ್ನಕುಮಾರ್ ದೇಸಾಯಿ, ಡಿ.ಎಸ್.ಪಿ ಮಲ್ಲಿಕಾರ್ಜುನ ಸಾಲಿ, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ ಎಸ್. ಇವರ ಮಾರ್ಗದರ್ಶನದಲ್ಲಿ ನಿಂಬರ್ಗಾ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಕುಮಾರ್ ಚವ್ಹಾಣ ಹಾಗೂ ಸಿಬ್ಬಂದಿಗಳಾದ ಶಂಕರ,ಸಿದ್ದಾರಾಮ, ಇಮಾಮ್, ಭಿಮಾಶಂಕರ, ರಮೇಶ್, ಮಲ್ಲಿನಾಥ, ಭಿಮಾಶಂಕರ ಉಡಗಿ, ಹೆಡ್ ಕಾನ್ಸ್ಟೇಬಲ್ ರಮೇಶ್, ಲಕ್ಮಿಪುತ್ರ,ಸಿದ್ದಣ್ಣ ನೇತೃತ್ವದಲ್ಲಿ ಧಾಳಿ ನಡೆಸಿ ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಬೈಕ್ ಕಳೆದುಕೊಂಡವರು ಸರಿಯಾದ ದಾಖಲಾತಿಗಳೊಂದಿಗೆ ನಿಂಬರ್ಗಾ ಪೊಲೀಸ್ ಠಾಣೆಗೆ ಭೇಟಿ ಕೊಡಬಹುದಾಗಿದೆ ಎಂದು ಪಿ.ಎಸ್.ಐ ಸುರೇಶ್ ಕುಮಾರ್ ಚವ್ಹಾಣ ತಿಳಿಸಿದ್ದಾರೆ.

ವರದಿ-ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Please follow and like us:

Related posts

Leave a Comment