ಅಧಿಕಾರಿಗಳ ಮೀನಾಮೇಷ, ಅಕ್ರಮ ಮರಳು ದಂಧಗೆ ಇಲ್ಲ ಕಡಿವಾಣ….!

ರಾಯಚೂರು: ರಾಯಾಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ದೊರೆಯುವ ಮರಳಿಗೆ ದೊಡ್ಡ ದೊಡ್ಡ ನಗರದಲ್ಲಿ ಬಾರಿ ಬೇಡಿಕೆ ಇದೆ. ರಾತ್ರೋರಾತ್ರಿ ದುಡ್ಡುಗಳಿಸಬೇಕು ಎನ್ನುವ ಕೆಲವರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದು. ತಾಲೂಕಿನ ಗಿಣಿವಾರ ಹಾಗೂ ಅಲಬನೂರು ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಹಳ್ಳದಲ್ಲಿ ಮರಳನ್ನು ಅಕ್ರಮವಾಗಿ ಟ್ಯಾಕ್ಟರ್ ನಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅಲಬನೂರು ಗ್ರಾಮದಲ್ಲಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ ಟ್ಯಾಕ್ಟರ್ ಗುದ್ದಿದ ಪರಿಣಾಮ ಒಬ್ಬ ಬಾಲಕ ಮೃತಪಟ್ಟರು ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತು ಕೊಂಡಂತೆ ಕಾಣುತ್ತಿಲ್ಲ. ಈ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಿ ಬೆಂಗಳೂರು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಮೀನಾಮೇಷ ಏಣಿಸುತ್ತಿದ್ದಾರೆ ಎಂದು ಅಲಬನೂರು ಹಾಗೂ ಗಿಣಿವಾರ ಗ್ರಾಮದ ಜನತೆಯ ಆರೋಪವಾಗಿದೆ. ಆಕ್ರಮ ಮರಳು ದಂದೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ಮುಂದೆಯಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುತ್ತಾರಾ ಎನ್ನುವುದು ಕಾದು ನೊಡಬೇಕಿದೆ.

ವರದಿ- ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment