ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ- ಜೀವ ಭಯದಲ್ಲಿ ತಾಯಿ ಮಗಳು ಜೀವನ..!

ನಂಜನಗೂಡು: ಧಾರಾಕಾರ ಮಳೆಗೆ ವಾಸದ ಮನೆ ಕುಸಿದು ಬಿದ್ದಿರುವ ಘಟನೆ ನಂಜನಗೂಡು ತಾಲೂಕಿನ ಹೆಗಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗೌರಿ ಎಂಬುವರಿಗೆ ಸೇರಿದ ವಾಸದ ಮನೆಯ ಒಂದು ಭಾಗ ಕುಸಿದುಬಿದ್ದಿದೆ. ಮಧ್ಯರಾತ್ರಿ ವೇಳೆ ಮನೆ ಕುಸಿತದಿಂದ ಗೌರಿ ಹಾಗೂ ಮಗಳು ಹೊರಗೆ ಓಡಿಬಂದಿದ್ದು, ಸದ್ಯ ಯಾವುದೇ ಪ್ರಾಣಾಪಾಯವಿಲ್ಲದೇ ತಾಯಿ ಮಕ್ಕಳು ಪಾರಾಗಿದ್ದಾರೆ. ಸರ್ಕಾರದಿಂದ ಮನೆ ನಿರ್ಮಾಣಕ್ಕಾಗಿ ಗೌರಿ ಹಲವು ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳಿಂದ ಯಾವುದೇ ರೀತಿಯಾ ಸ್ಪಂದನೆ ಸಿಕ್ಕಿಲ್ಲ, ಸದ್ಯದ ಪರಿಸ್ಥೀತಿಯಲ್ಲಿ ಶಿಥಿಲಗೊಂಡಿರುವ ಮನೆಯಲ್ಲೇ ಜೀವಭಯದಲ್ಲಿ ತಾಯಿ ಮಗಳು ಜೀವನ ಸಾಗಿಸುತ್ತಿದ್ದಾರೆ. ಇವರ ಪರಿಸ್ಥೀತಿ ಅರಿತ ಸರ್ಕಾರ ಈಗಾಲಾದ್ರೂ ಗೌರಿ ಅವರಿಗೆ ಸ್ವಂತ ಮನೆ ಕಲ್ಪಿಸಿಕೊಡುತ್ತಾ ಕಾದು ನೋಡಬೇಕಿದೆ.

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment