ನದಿಗೆ ಈಜಲು ತೆರಳಿ ಬಿಎಸ್ಪಿ ಅಧ್ಯಕ್ಷ ಸಾವು-ರಾಮಚಂದ್ರ..!

ನಂಜನಗೂಡು : ಕಬಿನಿ ನಾಲೆಯಲ್ಲಿ ಈಜಲು ಹೋಗಿ ಬಿಎಸ್ಪಿ ತಾಲೂಕು ಅಧ್ಯಕ್ಷ ಸಾವನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಸಿಂಗಾರಿ ಪುರ ಗ್ರಾಮದಲ್ಲಿ ನಡೆದಿದೆ. ಸಿಂಗಾರಿಪುರ ಗ್ರಾಮದ 48 ವರ್ಷದ ರಾಮಚಂದ್ರ ಎಂಬಾತ ಉಪ್ಪಿನಹಳ್ಳಿ ಮುಖ್ಯ ರಸ್ತೆಯಲ್ಲಿ ಬೆಳ್ಳಂ ಬೆಳಿಗ್ಗೆ ವಾಕ್ ಮುಗಿಸಿಕೊಂಡು ತೆರಳುತ್ತಿದ್ದರು. ನಂತರ ರಾಮಚಂದ್ರ ಕಬಿನಿ ನಾಲೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿದ್ದಂತಹ ಯುವಕ ನಾಲೆಯಲ್ಲಿ ಮುಳುಗಿ ರಾಮಚಂದ್ರರನ್ನು ಹುಡುಕಲು ಪ್ರಾರಂಭಿಸಿದ್ದಾರೆ ಆದ್ರೆ ರಾಮಚಂದ್ರರವರ ಗುರುತು ಮಾತ್ರ ಪತ್ತೆಯಾಗಿಲ್ಲ, ನಂತರ ಯುವಕ ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾನೆ, ಇನ್ನೂ ವಿಷಯ ತಿಳಿಯುತ್ತಿದ್ದಂತೆ ಮೃತ ವ್ಯಕ್ತಿಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ನಾಲೆಯ ಬಳಿ ಬಂದು ಸಾಕಷ್ಟು ದೂರದವರೆಗೂ ಹುಡುಕಾಟ ನಡೆಸಿದ್ದರೂ ರಾಮಚಂದ್ರರವರ ಮೃತದೇಹ ಪತ್ತೆಯಾಗಿಲ್ಲ,

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment