ಹಂಪನಗೌಡ ಬಾರ್ದಲಿಗೆ ಟಾಂಗ್ ಕೊಟ್ಟ ವೆಂಕಟರಾವ್ ನಾಡಗೌಡ..!

ಸಿಂಧನೂರು: ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿ ರೈತರ ನೆರವಿಗೆ ಬರಬೇಕು, ಇಲ್ಲವಾದರೆ ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಶಾಸಕ ವೆಂಕಟರಾವ್ ನಾಡಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸಿಂಧನೂರು ನಗರದ ಶಾಸಕ ಕಾರ್ಯಾಲಯದಲ್ಲಿ ಕರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಉತ್ತಮ ಮಳೆಯಾಗಿ ಕಾಲುವೆಗಳಿಗೆ ಸರಿಯಾದ ಸಮಯಕ್ಕೆ ನೀರು ಸರಬರಾಜು ಮಾಡಿದ ಫಲವಾಗಿ ರೈತಾಪಿ ವರ್ಗವು ಬೆಳೆಯನ್ನು ಬೆಳೆಯದಿದ್ದಾರೆ. ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಮಾದರಿಯಲ್ಲಿ ರಾಜ್ಯ ಸರ್ಕಾರವು ಭತ್ತ ಖರೀದಿ ಕೇಂದ್ರ ಪ್ರಾರಂಭ ಮಾಡಿ ರೈತಾಪಿ ಜನರ ನೆರವಿಗೆ ಬರಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುತ್ತದೆ. ನಾನು ಕೋವಿಡ್ ನಿಂದ ಗುಣಮುಖವಾಗುವಂತೆ ಪಕ್ಷದ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ,ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು. ನಂತರ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ವೆಂಕಟರಾವ್ ನಾಡಗೌಡ ಟಾಂಗ್ ಕೊಟ್ಟಿದ್ದು ಹಂಪನಗೌಡ ಅವರ ಅವಧಿಯಲ್ಲಿ ಅವರು ಎಷ್ಟು ಕಚೇರಿಗಳನ್ನು ತಂದಿದ್ದಾರೆ. ಯಾವ ಕಚೇರಿ ಕಟ್ಟಡಗಳನ್ನು ಪೂರ್ಣಗೊಳಿಸಿದ್ದಾರೆ ಹೇಳಿಲಿ.ನಗರ ಸಭೆ ಕಟ್ಟಡ, ಮಿನಿ ವಿಧಾನ ಸೌದ, ಕೆ.ಇ.ಬಿ ಕಚೇರಿ, ತಾಯಿ ಮಕ್ಕಳ ಆಸ್ಪತ್ರೆ, ಸೇರಿದಂತೆ ಅನೇಕ ಕಚೇರಿಗಳಲ್ಲಿ ನಾನು ನನ್ನ ಅವಧಿಯಲ್ಲಿ ಕೆಲಸಗಳನ್ನು ಮಾಡಿರುವೆ. ಜೊತೆಗೆ ನೂತನ ಪೋಲಿಸ್ ಕಟ್ಟಡವನ್ನು ನಿರ್ಮಾಣ ಮಾಡಿರುವೆ. ಅಕ್ರಮ ಚಟುವಟಿಕೆಗಳನ್ನು ಮೊದಲಿನಿಂದಲೂ ವಿರೋಧ ಮಾಡುವವನು ನಾನು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಪೋಲಿಸ್ ವರಿಷ್ಠ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಸ್ಪೀಟು ಆಡುವವರು ಕಾಂಗ್ರೆಸ್ ಪಕ್ಷದವರೇ ಹೊರತು ನಮ್ಮ ಪಕ್ಷದವರಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ವರದಿ- ಸೈಯದ್ ಬಂಧೇಬನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment