ಕುರಿಗಾರರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ಸಚಿವರಿಗೆ ಒತ್ತಡ..!

ಲಿಂಗಸೂಗೂರು : ಕುರಿಗಾರರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ಒತ್ತಡ ತರಬೇಕು ಎಂದು ಒತ್ತಾಯಿಸಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪದಾದಿಕಾರಿಗಳು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆಎಸ್. ಈಶ್ವರಪ್ಪನವರಿಗೆ ಬೆಂಗಳೂರಿನಲ್ಲಿ ಮನವಿ ಮಾಡಿದರು. ಸಂಚಾರಿ ಕುರಿಗಾರರು ಮತ್ತು ಸಾಂಪ್ರದಾಯಿಕ ಕುರಿಸಾಕಣಿಕೆದಾರರಿಗೆ ಅನುಕೂಲವಾಗಿದ್ದ ಸರ್ಕಾರದ ಅನುಗ್ರಹ ಯೋಜನೆ ರದ್ದು ಪಡಿಸಿದ್ದನ್ನು ಪುನಃ ಪ್ರಾರಂಭಿಸಬೇಕು. ಗೋಮಾಳ ಮತ್ತು ಗುಡ್ಡಗಾಡು ಅರಣ್ಯದಲ್ಲಿ ಕುರಿ ಮೇಯಿಸುವ ಸಂಚಾರಿ ಕುರಿಗಾರರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ತಡೆಯಬೇಕು. ಮತ್ತು ಕುರಿಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸುವಂತೆ ಒತ್ತಡ ತರುವಂತೆ ಒತ್ತಾಯಿಸಿ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಈಶ್ವರಪ್ಪ ನವರಿಗೆ ಮನವಿ ಮಾಡಿದರು.

ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.

Please follow and like us:

Related posts

Leave a Comment