ಗುತ್ತಿಗೆದಾರ ಸಂಘದ ನೂತನ ಅಧ್ಯಕ್ಷರಾಗಿ ಅಗಸನಪುರ ಕೃಷ್ಣ ರವರನ್ನು ಆಯ್ಕೆ..!

ಮಳವಳ್ಳಿ: ಮಳವಳ್ಳಿ ಪಟ್ಟಣದ ಗುತ್ತಿಗೆದಾರ ಸಂಘದ ಕಚೇರಿಯಲ್ಲಿ ಇಂದು ಅಧ್ಯಕ್ಷ ಆಯ್ಕೆಯನ್ನು 14 ಮಂದಿ ನಿರ್ದೇಶಕರು ಒಮ್ಮತವಾಗಿ ಆಯ್ಕೆ ಮಾಡಿದ್ದಾರೆ. ನೂತನ ಅಧ್ಯಕ್ಷರಾಗಿ ಅಗಸನಪುರ ಕೃಷ್ಣ ರವರನ್ನು ಆಯ್ಕೆ ಮಾಡಿದ್ದು, ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರೊದು ಸಂತಸ ತಂದಿದೆ. ಗುತ್ತಿಗೆದಾರರ ಸಮಸ್ಯೆಗಳು ಏನೇ ಇದ್ದರು ಅದನ್ನು ಬಗೆಹರಿಸುವುದು ನನ್ನ ಕರ್ತವ್ಯ ಎಂದು ಭರವಸೆ ನೀಡಿದರು. ಇನ್ನೂ ಈ ವೇಳೆ ನೂತನ ಅಧ್ಯಕ್ಷರಿಗೆ ಗುತ್ತಿಗೆದಾರರು ಹಾಗೂ ಸಂಘದ ನಿರ್ದೇಶಕರುಗಳು ಅಭಿನಂದಿಸಿದ್ದು, ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಹಿಟ್ಟನಹಳ್ಳಿ ಪುಟ್ಟಸ್ವಾಮಿ, ಗೌರವಾಧ್ಯಕ್ಷ ಹನುಮಂತಗೌಡ, ಪ್ರಧಾನಕಾರ್ಯದರ್ಶಿ ಪುಟ್ಟಬಸವೇಗೌಡ, ಖಜಾಂಚಿ ವೆಂಕಟೇಶ್, ಶಿವಣ್ಣ, ನವೀನ್ ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment