ಮಾಸ್ಕ್ ಇಲ್ಲದೇ ರೋಡ್ ಗೆ ಇಳಿದ ವಾಹನ ಸವಾರರಿಗೆ ಬಿತ್ತು ದಂಡ..!

ಕವಿತಾಳ:ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುವ ವಾಹಗಳಿಗೆ ಎಎಸ್ಐ ಲಿಂಗನಗೌಡ,ಅವರ ನೇತೃತ್ವದಲ್ಲಿ 20 ಹೆಚ್ಚು ವಾಹನ ಸವಾರರಿಗೆ ದಂಡ ವಿಧಿಸಲಾಯಿತು.ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ಮಾಸ್ಕ್ ಧರಿಸದೇ ವಾಹನ ಚಲಾಯಿಸುವ ವಾಹನ ಸವಾರರಿಗೂ ದಂಡ ವಿಧಿಸುವ ಮೂಲಕ ಕೊರೊನ ಜಾಗ್ರತಿ ಮೂಡಿಸಲಾಯಿತು. ಒಟ್ಟಾರೆ ಬೆಳಿಗ್ಗೆಯಿಂದ ಸುಮಾರು ವಾಹನಗಳ ತಪಾಸಣೆ ಹಾಗೂ ಸುಖ ಸುಮ್ಮನೇ ಮಾಸ್ಕ್ ಇಲ್ಲದೆ ರೋಡಿಗಿಳಿದ ವಾಹನ ಸವಾರರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂದಿದ್ದಾರೆ.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ.

Please follow and like us:

Related posts

Leave a Comment