ಜಿಟಿ ಜಿಟಿ ಮಳೆಗೆ ಮೂಡಲಗಿ ಜನರ ಜೀವನ ಅಸ್ತವ್ಯಸ್ಥ..!

ಮೂಡಲಗಿ :ಮೂಡಲಗಿ ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ ,ಕಪ್ಪು ಮೋಡ ಆವರಿಸಿದೆ ನಿನ್ನೆ ಸಂಜೆಯಿಂದ ಬಿಟ್ಟೂ ಬಿಡದಂತೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮೂಡಲಗಿ, ವಡೇರಹಟ್ಟಿ, ಧರ್ಮಟ್ಟಿ ನಾಗನೂರು ಹಾಗೂ ಅನೇಕ ಗ್ರಾಮಗಳಲ್ಲಿ ಮಳೆಯಾಗಿದೆ. ಜಿಟಿಜಿಟಿ ಮಳೆಯಿಂದಾಗಿ ರೈತರು ಕೃಷಿ ಕಾರ್ಯಗಳಿಗೆ ಹೋಗುವುದು ಕಷ್ಟವಾಗಿದೆ ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿಕೊಂಡಿದ್ದರು ಹಳ್ಳಕೊಳ್ಳಗಳು ಭರ್ತಿಯಾಗಿ ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತುಕೊಂಡು ಕೆಲಹೊತ್ತು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.ಗುರ್ಲಾಪುರ ರಸ್ತೆಯಿಂದ ಅನೇಕ ರಸ್ತೆಗಳಲ್ಲಿ ಬಿದ್ದಿರುವ ತಗ್ಗಿನಲ್ಲಿ ಅಪಾರ ನೀರು ನಿಂತು ವಾಹನ ಚಾಲಕರು ತೊಂದರೆ ಅನುಭವಿಸಬೇಕಾಯಿತು. ವೇಗದಿಂದ ಬರುತ್ತಿದ್ದ ವಾಹನಗಳಿಂದ ಕೆಸರು ನೀರು ಮೇಲಕ್ಕೆ ತುಂಬುತ್ತಿರುವುದು ಪಾದಚಾರಿಗಳು ಹಿಂಸೆ ಅನುಭವಿಸಬೇಕಾಯಿತು. ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ಆತಂಕದಲ್ಲಿದ್ದ ಜನತೆ ಉಂಟಾಗಿರುವ ಕಾರಣ ಜಿಲ್ಲೆಯ ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ತಿಳಿದು ಬಂದಿದೆ.

ವರದಿ-ಶಂಕರ ಭಜಂತ್ರಿ ಎಕ್ಸ್ ಪ್ರೆಸ್ ಟಿವಿ ಮೂಡಲಗಿ

Please follow and like us:

Related posts

Leave a Comment