ಕಳಪೆ ಕಾಮಾಗಾರಿಯಿಂದ ಸರ್ಕಾರಿ ಆಸ್ಪತ್ರೆಯ ಗೋಳು ಕೇಳೊರಿಲ್ಲ..!

ಕಲಬುರುಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಸರ್ಕಾರಿ ಆಸ್ಪತ್ರೆಯನ್ನು 2016ರಲ್ಲಿ 1.25ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು.ಆದರೆ ಕಟ್ಟಡ ಸಂಪೂರ್ಣ ಕಳಪೆ ಕಾಮಾಗಾರಿಯಿಂದ ನಿರ್ಮಾಣವಾಗಿರೊದ್ರಿಂದ ಕಟ್ಟಡ ಪ್ರತಿ ವರ್ಷ ಮಳೆ ಬಂದಾಗಲೂ ಕೊಠಡಿ ತುಂಬೆಲ್ಲಾ ನೀರು ತುಂಬಿ ಅಸ್ತವ್ಯಸ್ತವಾಗುತ್ತದೆ. ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಕಿತ್ತು ಹೋಗಿದ್ದು ಗೊಡೆಗಳು ಬಿರುಕು ಬಿಟ್ಟಿವೆ. ಆಸ್ಪತ್ರೆಗೆ ಬರುವ ರೋಗಿಗಳು ಸೋರುವ ನೀರಿನಲ್ಲಿಯೇ ಚಿಕಿತ್ಸೆ ಪಡೆದು ಕೊಳ್ಳುವಂತಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿನಿತ್ಯ ನೀರು ತುಂಬಿರುವ ಕೊಠಡಿಯಿಂದ ನೀರನ್ನು ತೆಗೆದು ಹಾಕುವುದೇ ದೊಡ್ಡ ಕೆಲಸವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೂಳ್ಳದೇ ಹೋದರೆ ಕೆಲವೇ ವರ್ಷಗಳಲ್ಲಿ ಕಟ್ಟಡ ಸಂಪೂರ್ಣ ಹಾಳಾಗಲಿದೆ. ಇನ್ಮೇಲಾದ್ರೂ ಸಂಬಂಧಪಟ್ಟ ಅಧಿಕಾರಿಗಳೂ ಸೂಕ್ತ ಕ್ರಮ ಕೈಗೊಳ್ಳತ್ತಾರೊ ಕಾದು ನೊಡಬೇಕಿದೆ.

ವರದಿ-ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Please follow and like us:

Related posts

Leave a Comment