ಹೆಲ್ಮೆಟ್ ಧರಿಸಿ ನಿಮ್ಮ ಮತ್ತು ನಿಮ್ಮ ಕುಟುಂಬದರ ಪ್ರಾಣ ಉಳಿಸಿ..!

ಕೂಡ್ಲಿಗಿ: ಗುಡೆಕೋಟೆ ಪೊಲೀಸ್ ಠಾಣವ್ಯಾಪ್ತಿಯಲ್ಲಿ ಇಂದು ಮೇಲಾಧಿಕಾರಿ ಸರ್ಕಲ್ ಇನ್ಸ್ಪೆಕ್ಟರ್ ಪಂಪನ ಗೌಡ ಮಾರ್ಗದರ್ಶನಂತೆ ಗುಡೆಕೋಟೆ ಪಿ. ಎಸ್. ಐ. ರಾಮಪ್ಪ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರು ಸೇರಿ ಗುಡೆಕೋಟೆ ಪ್ರಮುಖ ಬೀದಿಗಳಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಸವಾರರ ಪ್ರಾಣ ಉಳಿಸಿ ಎಂದು ಜಾಥಾ ಮಾಡುವಾದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಗುಡೆಕೋಟೆ ಪಿ. ಎಸ್. ಐ ರಾಮಪ್ಪ ಮಾತನಾಡಿ ದಿನೇ ದಿನೇ ಅಪಘಾತ ಹೆಚ್ಚುತ್ತಿದ್ದು ಅದರಲ್ಲಿ ವಿಶೇಷವಾಗಿ ಬೈಕ್ ಸವಾರರು ರಸ್ತೆ ಅಪಘಾತದಲ್ಲಿ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಬೈಕ್ ಸವಾರರು ಚಾಲನೆ ಮಾಡುವಾಗ ತಮ್ಮ ರಕ್ಷಣೆಗೆ ಹೆಲ್ಮೆಟ್ ಧರಿಸಿದರೆ ತಮ್ಮನ್ನು ಮತ್ತು ತನ್ನ ಕುಟುಂಬದವರನ್ನು ತಾವೇ ಕಾಪಾಡಿಕೊಂಡಂತೆ ಎಂದು ಹೇಳಿದರು. ಸಾರ್ವಜಿನಿಕರು ಜಾಗೃತರಾಗಿ ಕಾನೂನು ನಿಹಮಗಳನ್ನು ಕಡ್ಡಾಯವಾಗಿ ಪಾಲಿಸಿಬೇಕು. ಸವಾರಿ ಮಾಡುವಾಗ ಅತಿ ವೇಗವಾಗಿ ಮತ್ತು ಮದ್ಯಪಾನ ಸೇವಿಸಿ ಬೈಕ್ ಸವಾರಿ ಮಾಡುವುದು ಒಳ್ಳೆಯದಲ್ಲಾ, ಸಾರ್ವಜನಿಕರು ಕೊರೊನಾ ಎಂಬ ಮಹಾರೋಗ ದಿನೇ ದಿನಕ್ಕೆ ಹೆಚ್ಚುತ್ತಿರುವುದರಿಂದ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.

ವರದಿ-ನಂದೀಶ್ ನಾಯಕ ಎಕ್ಸ್ ಪ್ರೆಸ್ ಟಿವಿ ಕೂಡ್ಲಿಗಿ

Please follow and like us:

Related posts

Leave a Comment