ಮಳೆಗೆ ಹೊಲಗದ್ದೆಗಳು ಸಂಪೂರ್ಣ ಜಲಾವೃತ..!

ಶಹಾಪುರ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಕೊಳ್ಳೂರು ಸಾವೂರು ಟೊಣ್ಣೂರಿನ ಗ್ರಾಮದ ಹೊಲ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ಬೆಳೆಗಳು ನಾಶವಾಗಿವೆ.ಜಮೀನಿನಲ್ಲಿ ಬೆಳೆದ ಬೆಳೆ ಮಳೆಗೆ ಕೊಚ್ಚಿಕೊಂಡು ಹೋದರೆ ಕೆಲವೊಂದು ಜಮೀನುಗಳಲ್ಲಿ ನೆಲಕಚ್ಚಿವೆ.ಆದ್ದರಿಂದ ರೈತರು ಹಾನಿಯಾದ ಬೆಳೆಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಧಾರಾಕಾರ ಮಳೆಗೆ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈಗಾಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ.

Please follow and like us:

Related posts

Leave a Comment