ಜೀವದ ರಕ್ಷಣೆಗಾಗಿ ಜನರಿಗೆ ವಿಮೆಗಳ ಬಗ್ಗೆ ಅರಿವು ಮೂಡಿಸಲು ಮುಂದಾದ ನಾಗಲಕ್ಷ್ಮೀ..!

ಪಾವಗಡ: ಪಾವಗಡ ತಾಲೂಕಿನಲ್ಲಿ ಸಾರ್ವಜನಿಕರಿಗೆ ಕೊರೋನ ಹಾಗೂ ಜೀವದ ರಕ್ಷಣೆಗಾಗಿ ವಿಮೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ನಾಗಲಕ್ಷ್ಮೀ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಮೂಲತಹ ಪಾವಗಡ ತಾಲೂಕಿನ ವೆಂಕಟಪುರ ಗ್ರಾಮದ ನಿವಾಸಿ, ಇತ್ತೀಚಿನ ದಿನಗಳಲ್ಲಿ ಕೊರೋನ ಎಂಬ ಭಯಾನಕ ರೋಗದಿಂದ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಅದರಲ್ಲಿ ಹೆಚ್ಚಾಗಿ ಪ್ರಾಯದ ಯುವಕರು ಹೆಚ್ಚಾಗಿ ಮೃತ ಪಡುತ್ತಿದ್ದಾರೆ. ವಿಮೆ ಮಾಡಿಸುವುದರಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ರಕ್ಷಣೆಯಾದರು ಕೈಗೊಡಲಿ ಎಂಬ ಉದ್ದೇಶದಿಂದ ಜನ ಬರಿತಾ ಪ್ರದೇಶಗಳದಂತಹ ಬಸ್ ನಿಲ್ದಾಣಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ನಾಗಲಕ್ಷ್ಮಮ್ಮ ಜನರಿಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.ಇನ್ನೂ ಪಾವಗಡ ತಾಲ್ಲೂಕು ಗಡಿ ಪ್ರದೇಶವಾದ ಕಾರಣ ಪಟ್ಟಣಕ್ಕೆ ಹೆಚ್ಚಾಗಿ ಆಂಧ್ರದ ಕಡೆಯ ಜನರು ಹೆಚ್ಚಾಗಿ ಬರುವುದರಿಂದ ವಿಮೆ ಸೌಲಭ್ಯಗಳ ಮಾಹಿತಿಯನ್ನು ತೆಲಗು ಹಾಗೂ ಕನ್ನಡ ಭಾಷೆಯಲ್ಲಿ ತಿಳಿಸುವ ಕೆಲಸ ಮಾಡುತ್ತಿದ್ದಾರೆ.

ವರದಿ- ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment