ಸ್ನೇಹಿತರ ಜೊತೆ ಪಾರ್ಟಿಗೆಂದು ತೆರಳಿದ್ದ ವ್ಯಕ್ತಿ ಶವವಾಗಿ ಪತ್ತೆ.!

ಕೋಲಾರ: ವ್ಯಕ್ತಿಯೋರ್ವ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿರುವ ಅಂತರಗಂಗೆ ಬೆಟ್ಟದಲ್ಲಿ ನಡೆದಿದೆ.ತಾಲೂಕಿನ ಹೊಗರಿ ಗ್ರಾಮದ ಸುಮಾರು 52 ವರ್ಷದ ವೆಂಕಟೇಶ್ ಮೃತ ದುರ್ದೈವಿಯಾಗಿದ್ದು, ನಿನ್ನೆ ಸುಮಾರು ಸಂಜೆ ಹೊತ್ತಿಗೆ ಸ್ನೇಹಿತರ ಜೊತೆ ಮಧ್ಯಪಾನ ಮಾಡಲೆಂದು ಅಂತರಗಂಗೆ ಬೆಟ್ಟಕ್ಕೆ ತೆರಳಿದ್ದರು ಎನ್ನಲಾಗಿದೆ, ಆತ ಬೆಳಗ್ಗೆ ಅಷ್ಟರಲ್ಲಿ ಶವವಾಗಿ ಪತ್ತೆಯಾಗಿರೊದ್ರಿಂದ ಮೃತನ ಕುಟುಂಬಸ್ಥರು ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸುತ್ತಾ ಇದ್ಧಾರೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ-ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment