ತಾಲೂಕು ಮಟ್ಟದಲ್ಲಿ ಕೊವೀಡ್ ಕೇಂದ್ರ ಉದ್ಘಾಟನಾ..!

ವಿಜಯಪುರ: ನಿಂಬೆ ನಾಡಿನ ಇಂಡಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಆಮ್ಲಜನಕ ಪೂರೈಕೆ ಘಟಕ, ಕೋವಿಡ್ ವಾರ್ಡ್ , ಐ ಸಿ ಯು, ಕಣ್ಣಿನ ಶಸ್ತ್ರ ಚಿಕಿತ್ಸಾ ವಿಭಾಗವನ್ನು ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್ ಯಾವುದೇ ರೀತಿಯ ರೋಗಗಳು ಉಲ್ಬಣಿಸಿದಾಗ ತಾಲ್ಲೂಕಿನ ಜನರು ವಿಜಯಪುರ ಅಥವಾ ಸೋಲಾಪುರಕ್ಕೆ ಹೋಗುವ ಸಮಸ್ಯೆ ಎದುರಾಗುತ್ತಿತ್ತು. ಇಂದಿನಿಂದ ತಾಲ್ಲೂಕಿನಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಿದ್ದು ಶ್ಲಾಘನೀಯ ಡಾಕ್ಟರ್ ಅನ್ನು ದೇವರೆಂದು ಭಾವಿಸುತ್ತೇವೆ ಎಲ್ಲಾರೂ ಆತ್ಮ ಸಾಕ್ಷಿಯಿಂದ ಕೆಲಸ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಹೇಳಿದರು.

ವರದಿ-ಶಂಕರ್ ಜಮಾದಾರ ಎಕ್ಸ್ಪ್ರೆಸ್ ನ್ಯೂಸ್ ಇಂಡಿ

Please follow and like us:

Related posts

Leave a Comment