ಅಧಿಕಾರ ಯಾವುದೇ ಆದ್ರೂ ಅದನ್ನೂ ಸ್ವೀಕರಿಸುವ ಮನಸ್ಸು ಮುಖ್ಯ- ಎ. ಮಂಜು..!

ಮಳವಳ್ಳಿ: ಮಳವಳ್ಳಿ ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಮಳವಳ್ಳಿ ಮಂಡಲದ ವತಿಯಿಂದ ಆತ್ಮನಿರ್ಭರ ಭಾರತ ವಿಶೇಷ ಕಾರ್ಯಾಗಾರ ಹಾಗೂ ಮಂಡಲ ಪದಾಧಿಕಾರಿಗಳ ಸಭೆಯನ್ನು ಮಾಜಿ ಸಚಿವ ಎ. ಮಂಜು ರವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಗ್ರಾ.ಪಂ ಗೆಲ್ಲಲು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಬೃಹತ್ ಮಟ್ಟದಲ್ಲಿ ಬೆಳೆದಿದೆ, ಅದನ್ನು ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ. ಅಧಿಕಾರ ಯಾವುದೇ ಆದರೂ ಅದನ್ನೂ ಸ್ವೀಕರಿಸಬೇಕು, ನರೇಂದ್ರ ಮೋದಿರವರು ರೈತರಿಗೆ ಸಾಕಷ್ಟು ಯೋಜನೆಗಳನ್ನು ತಂದಿರುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಗ್ರಾ.ಪಂ ಗಳನ್ನು ಈ ಬಾರಿ ಅಧಿಕಾರಿ ಹಿಡಿದು ಬಳಿಕ ತಾ.ಪಂ, ಜಿ.ಪಂ ಅಧಿಕಾರ ಹಿಡಿಯಲು ಕಾರ್ಯಕರ್ತರು ಶ್ರಮಪಡಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್ ಕೃಷ್ಣ, ರಾಷ್ಟ್ರ ಪರಿಷತ್ ಸದಸ್ಯ. ಡಾ. ಸಿದ್ದರಾಮಯ್ಯ, ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಜಿಲ್ಲಾಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಹೆಬ್ಬಣಿಬಸವರಾಜು, ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಶಿವಸ್ವಾಮಿ, ಪ್ರಧಾನಕಾರ್ಯದರ್ಶಿ ಕೆ.ಸಿ ನಾಗೇಗೌಡ, ಅಶೋಕಕ್ಯಾತನಹಳ್ಳಿ, ಜಿಲ್ಲಾ ವಕ್ತಾರ ಚಿಕ್ಕಣ್ಣ, ಸೇರಿದಂತೆ ಮತ್ತಿತ್ತರರು

ವರದಿ- ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment