ರೈತರ ಪರ ಒಲವು ತೋರಿದ ಮಾಜಿ ಶಾಸಕ ವಜ್ಜಲ್..!

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಲಿಂಗಸೂಗೂರು ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಮಳೆಯಿಂದ ಹಾನಿಯಾಗಿ, ನಷ್ಟ ಅನುಭವಿಸುತ್ತಿರುವ ರೈತರ ಮಳೆಯಿಂದ ಬಿದ್ದಿರುವ ಮನೆಗಳ ಮತ್ತು ಜಮೀನುಗಳಲ್ಲಿ ಹೊಡೆದಿರುವ ಬದುಗಳ, ಹಾಗೂ ಬೆಳೆ ಹಾನಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆಹಾಕಿ ಎಲ್ಲಾರಿಗೂ ಸರಿಯಾದ ರೀತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಮಾಜಿ ಶಾಸಕ ಮಾನಪ್ಪ ಡಿ ವಜ್ಜಲ್ ಅಧಿಕಾರಿಗಳ ಜೊತೆ ಚರ್ಚಿಸಿದರು. ನಷ್ಟವಾಗಿರುವವರ ಮಾಹಿತಿಯನ್ನು ಸಂಗ್ರಹಿಸಿ ಸರಕಾರದಿಂದ ಹೆಚ್ಚಿನ ಅನುದಾನವನ್ನ ತಂದು ಅದನ್ನು ಬದುಕು ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ ನಿರ್ಣಯ ಮಾಡಿದರು.ಇದೇ ಸಂದರ್ಭದಲ್ಲಿ ಎಲ್ಲಾ ಕೋರೋನ ವಾರಿಯರ್ಸ್ಗಳಿಗೆ ಸಹಾಯ ಆಯುಕ್ತರ ಮೂಲಕ ಧನ್ಯವಾದಗಳನ್ನು ತಿಳಿಸಿದರು.

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment