ವಾಲ್ಮೀಕಿ ಸಮುದಾಯದ ವತಿಯಿಂದ ವೀರ ಮದಕರಿ ಜಯಂತಿ ಆಚರಣೆ..!

ದೇವದುರ್ಗ :ಮೊಟ್ಟ ಮೊದಲ ಬಾರಿಗೆ ದೇವದುರ್ಗ ತಾಲೂಕಿನ ಗುರುಭವನದಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ವೀರಮದಕರಿ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ನಂತರ ವೀರ ಮದಕರಿ ನಾಯಕರ ಭಾವಚಿತ್ರಕ್ಕೆ ಹಸಿರು ಸೇನೆ ಜಿಲ್ಲಾ ಸಂಚಾಲಕರಾದ ಶ್ರೀಮತಿ ರೂಪಾ ಶ್ರೀನಿವಾಸ್ ಪುಷ್ಪಾರ್ಚನೆ ಗೈದು ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಚಿತ್ರದುರ್ಗದ ಪಾಳೇಗಾರರಾಗಿದ್ದ ಮದಕರಿ ನಾಯಕರು ತಮ್ಮ ಆಡಳಿತಾವಧಿಯಲ್ಲಿ ನಾಯಕರ ಏಳಿಗೆಗೆ ಒತ್ತು ನೀಡಿದ್ದರು. ಹಾಗೂ ಅಪ್ಪಟ ದೇಶಭಕ್ತರಾಗಿದ್ದು ದೇಶ ಸೇವೆಗೆ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟವರು. ಅವರ ಆದರ್ಶಗಳನ್ನು ಇಂದಿನ ಯುವಜನತೆಗೆ ಮಾದರಿಯಾಗಿದೆ. ಅಂತವರನ್ನು ಸ್ಮರಿಸುತ್ತಿರುವುದು ಸಂತಸದ ವಿಚಾರ ಅದಷ್ಟು ಬೇಗನೆ ಸ್ಮಾರಕ ಥೀಮ್ ಪಾರ್ಕ್ ಚಿತ್ರದುರ್ಗದಲ್ಲಿ ಕೂಡಲೇ ನಿರ್ಮಾಣ ಮಾಡಬೇಕು, ಕೊರೊನಾ ಹಿನ್ನೆಲೆಯಲ್ಲಿ ವೀರ ಮದಕರಿ ನಾಯಕರ ಜಯಂತಿಯನ್ನು ಸರಳವಾಗಿ ಆಚರಿಸುವಂತಾಗಿದೆ ಮುಂದಿನ ದಿನಮಾನಗಳಲ್ಲಿ ಸರಕಾರದ ವತಿಯಿಂದ ಆಚರಣೆ ಮಾಡುವಂತೆ ಆಗಬೇಕು ಎಂದರು. ಈ ಸಂಧರ್ಭದಲ್ಲಿ ಬಸವರಾಜ ಪೊಲೀಸ್ ಪಾಟೀಲ್ ನೌಕರರ ಸಂಘದ ಅಧ್ಯಕ್ಷರು, ಉಮಾ ದೇವಿ, ರವಿ ಕುಮಾರ್ ರಾಯಚೂರಕರ್, ರಾಮಣ್ಣ ಕರಡಿಗುಡ್ಡ, ಗೋವಿಂದನಾಯಕ, ಮರಿಲಿಂಗ ಪಾಟೀಲ್, ಅನೀಲ್ ಕುಮಾರ್ ಸೊಮಕಾರ್, ಇನ್ನಿತರರು ಭಾಗವಹಿಸಿದರು,

ವರದಿ- ಸುರೇಶ್ ಭವಾನಿ ಎಕ್ಸ್ ಪ್ರೆಸ್ ನ್ಯೂಸ್ ದೇವದುರ್ಗ

Please follow and like us:

Related posts

Leave a Comment