ನಂಜನಗೂಡಿನಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಕೊರೊನಾ ಪ್ರಕರಣ..!

ನಂಜನಗೂಡು: ನಂಜನಗೂಡಿನಲ್ಲಿ ಆತಂಕ ಸೃಷ್ಟಿಸಿದ ಮಹಾಮಾರಿ ಕೊರೋನಾ ಒಂದೇ ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದೆ. ನಂಜನಗೂಡಿನ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ 62 ವರ್ಷದ ಶ್ರೀನಿವಾಸ್ ಹಾಗೂ ತ್ಯಾಗರಾಜ ಕಾಲೋನಿ ನಿವಾಸಿ ಮೆಡಿಕಲ್ ಸ್ಟೋರ್ ನ ಮಾಲಿಕರಾದ 47 ವರ್ಷದ ರವಿ ಎಂಬಾತನಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಇದುವರೆಗೂ ದಕ್ಷಿಣಕಾಶಿ ನಂಜನಗೂಡಿನಲ್ಲಿ 32 ಜನರನ್ನು ಬಲಿಪಡೆದ ಮಹಾಮಾರಿ ಕೊರೋನ ಈಗ ಒಟ್ಟಾರೆಯಾಗಿ 1925 ಪಾಸಿಟಿವ್ ಪ್ರಕರಣಗಳು ನಂಜನಗೂಡಿನಲ್ಲಿ ಕಂಡುಬಂದಿದೆ. 1585 ಪಾಸಿಟಿವ್ ವ್ಯಕ್ತಿಗಳು ಗುಣಮುಖರಾಗಿದ್ದು, 290 ಪಾಸಿಟಿವ್ ಪ್ರಕರಣದ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಮಾರಿ ಕೋರೋನ ಪಾಸಿಟಿವ್ ಆಗಿ ಇನ್ನಿತರ ಸಮಸ್ಯೆಗಳಿಂದ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ. ನಂಜನಗೂಡಿನಲ್ಲಿ ದಿನೇದಿನೇ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment