ರೈತರ ಲಕ್ಷಾಂತರ ಹಣ ದುರುಪಯೋಗವಾಗಿದೆ- ನಾಗರಾಜು..!

ಮಳವಳ್ಳಿ: ಮಳವಳ್ಳಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕ್ಯಾತನಹಳ್ಳಿಯಲ್ಲಿ ಕಂಪನಿ ಸಿಇಓ ಹಾಗೂ ಅಧ್ಯಕ್ಷರು ರೈತರ ಲಕ್ಷಾಂತರ ರೂ ಹಣ ದುರುಪಯೋಗವಾಗಿದೆ ಎಂದು ಮಳವಳ್ಳಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಉಪಾಧ್ಯಕ್ಷ ನಾಗರಾಜು ಆರೋಪಿಸಿದರು. ಮಳವಳ್ಳಿ ತಾಲ್ಲೂಕಿನ ದೊಡ್ಡಬೂವಳ್ಳಿಯಲ್ಲಿ ಮಳವಳ್ಳಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ಪ್ರಾರಂಭವಾದ ಕಂಪನಿ ರೈತರಿಂದ 1 ಸಾವಿರ ರೂ ಷೇರು ಪಡೆದು ಲಕ್ಷಾಂತರ ರೂ ವ್ಯವಹಾರ ನಡೆಯುತ್ತಿದ್ದು, ಕಳೆದ ವರ್ಷದಿಂದ ಹಣ ವಹಿವಾಟುಗಳ ಬಗ್ಗೆ ಲೆಕ್ಕ ಸಿಕ್ಕದೆ ಸಿಇಓ ಸೂರಜ್ ಹಾಗೂ ಅಧ್ಯಕ್ಷ ಎಂ. ಜಗದೀಶ್ ರವರು ಕಂಪನಿಯ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು. ರೈತರ ಹಣವನ್ನು ಬಳಸಿಕೊಳ್ಳಲು ಇವರಿಗೆ ಯಾವ ನೈತಿಕತೆವಿದೆ ಎಂದು ಪ್ರಶ್ನಿಸಿದ ಅವರು ಕೂಡಲೇ ಅವ್ಯವಹಾರ ಬಗ್ಗೆ ಮೇಲಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಕಂಪನಿಯ ಅಡಿಟ್ ಮಾಡಿಸಲಿಲ್ಲ ಎಂದು ಹೇಳುತ್ತಿದ್ದಾರೆ ಅವರ ಪ್ರಕಾರ ಜನವರಿ ವೇಳೆಗೆ 1.40 ಲಕ್ಷ ರೂ ಕಟ್ಟಬೇಕು ಎಂದು ಹೇಳುತ್ತಿದ್ದಾರೆ .ರೈತರ ಹಣವನ್ನು ಹೇಗೆ ಸ್ವತಃಕ್ಕೆ ಹಣ ಬಳಸಿಕೊಂಡರು . ಇದರ ಬಗ್ಗೆ ಮೇಲಾಧಿಕಾರಿಗಳು ತನಿಖೆ ಮಾಡಬೇಕೆಂದು ಒತ್ತಾಯಿಸಿದರು. 6 ಲಕ್ಷ ರೂ ವೆಚ್ಚ ಗೊಬ್ಬರವನ್ನು ಯಾವುದೇ ಲೈಸನ್ಸ್ ಇಲ್ಲದೆ ಅಧ್ಯಕ್ಷರು ತಮ್ಮ ಮನೆ ಹಾಕಿಕೊಂಡಿದ್ದರು.ಕಂಪನಿ ಹಣ ಬಳಸಿಕೊಂಡು ಕಂಪನಿಗೆ ಸಿಗಬೇಕಾದ ಆದಾಯವನ್ನು ಸಹ ತಪ್ಪಿಸಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಕೆ.ಎಂ ಜಗದೀಶ್. ಮಲ್ಲರಾಜೇ ಅರಸು, ಶಿವರಾಮು, ಮಂಜು, ಮಹೇಶ್, ಮಹದೇವಸ್ವಾಮಿ, ಎಂ. ಎನ್ ರಾಜೇ ಅರಸು ಸೇರಿದಂತೆ ಮತ್ತಿತ್ತರರು ಇದ್ದರು

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment