ಕಲಕೇರಿ ಗ್ರಾಮವನ್ನು ಹೋಬಳಿ ಗ್ರಾಮವನ್ನಾಗಿಸಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರು..!

ವಿಜಯಪುರ: ವಿಜಯಪುರ ಜಿಲ್ಲೆಯ ನೂತನ ತಾಳಿಕೋಟಿ ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ಇಂದು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಕಲಕೇರಿ ಗ್ರಾಮವನ್ನು ಹೋಬಳಿ ಗ್ರಾಮವನ್ನಾಗಿ ಮಾಡಬೇಕೆಂದು ಪ್ರತಿಭಟನೆಯನ್ನು ನಡೆಸಿದರು.ಕಲಕೇರಿ ಪಟ್ಟಣವು ಹೋಬಳಿ ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು ಕಲಕೇರಿಯಲ್ಲಿ ಸುಮಾರು ಐದು ಸಾವಿರಕ್ಕಿಂತ ಅಧಿಕ ಮನೆಗಳಿದ್ದು ಸುಮಾರು 19 ಸಾವಿರಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ತಾಲೂಕಿನಲ್ಲಿಯೇ ಕಲಕೇರಿ ದೊಡ್ಡ ಪಟ್ಟಣವಾಗಿದೆ ಸುಮಾರು 42 ಹಳ್ಳಿಗಳಿಗೆ ವ್ಯಾಪಾರ ಕೇಂದ್ರವಾಗಿದ್ದು ಮತ್ತು ಎಲ್ಲಾ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಲಕೇರಿ ಶಿಕ್ಷಣ ಕೇಂದ್ರವಾಗಿದೆ ಹಾಗೂ ಸುತ್ತಮುತ್ತಲಿನ ರೈತರಿಗೆ ಬಡ ಹೆಣ್ಣುಮಕ್ಕಳಿಗೆ ವಿಧವೆಯರಿಗೆ ವೃದ್ಧರಿಗೆ ತಾಳಿಕೋಟೆ ಪಟ್ಟಣಕ್ಕೆ ಹೋಗುವುದು ಕಷ್ಟಸಾಧ್ಯ ಇಲ್ಲಿಯೇ ಹೋಬಳಿ ಆದರೆ 42 ಹಳ್ಳಿ ಜನರಿಗೂ ಅನುಕೂಲವಾಗುವುದು ಎಲ್ಲಾ ಹಳ್ಳಿಗಳಿಂದ ಹದಿನೈದು ಕಿಲೋಮೀಟರ್ ಮಾತ್ರ ಕಲಕೇರಿ ಹತ್ತಿರ ಇರುವುದರಿಂದ ಇಲ್ಲಿಗೆ ಹೋಬಳಿ ಕೇಂದ್ರ ವಾಗುವುದು ಬಹಳ ಸೂಕ್ತವಾಗಿದೆ ಎಂದರು.ಈಗಾಗಲೇ ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು 2003ರಲ್ಲಿ 127 ದಿನಗಳವರೆಗೆ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಈ ವಿಷಯವಾಗಿ ಮಾನ್ಯ ಶಾಸಕರಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಶಿಲ್ದಾರ್ ಅವರಿಗೆ ವಿನಂತಿ ಮಾಡಿಕೊಂಡರು ಪ್ರಯೋಜನ ಆಗಿಲ್ಲ ಅದಕ್ಕಾಗಿ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ನಮ್ಮ ಕಲಿಕೇರಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಯ ಕಚೇರಿವರೆಗೂ ಪಾದಯಾತ್ರೆ ಮಾಡುವುದಾಗಿ ಹೇಳಿ ಮಾನ್ಯ ತಶಿಲ್ದಾರ್ ರವರಿಗೆ by ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.

ವರದಿ- ಶರತ್ ಗೌಡ ಎಕ್ಸ್ ಪ್ರೆಸ್ ಟಿವಿ ವಿಜಯಪುರ

Please follow and like us:

Related posts

Leave a Comment