ರಾಜೀವ್ ಗಾಂಧಿ ಸೇವಾ ಕೇಂದ್ರ ಜನರ ಉಪಯೋಗಕ್ಕಿಲ್ಲ ಎಂದು ಪ್ರತಿಭಟನೆ.!

ಮಳವಳ್ಳಿ: ಧನಗೂರು ಗ್ರಾಮಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಸಾರ್ವಜನಿಕರ ಉಪಯೋಗಕ್ಕೆ ಬಾರದೀರುವುದನ್ನು ಖಂಡಿಸಿ ಧನಗೂರು ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಮಳವಳ್ಳಿ ತಾಲ್ಲೂಕು ಧನಗೂರು ಗ್ರಾಮಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಧಿಕ್ ಪಾಷ ನೇತೃತ್ವದಲ್ಲಿ ಶಾಸಕ ಡಾ. ಕೆ ಅನ್ನದಾನಿ ವಿರುದ್ದ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಶಿಷ್ಟಾಚಾರವನ್ನು ಸರಿ ಪಾಲಿಸಿ ಉದ್ಘಾಟಿಸಿದ್ದರೂ ಮತ್ತೆ ಉದ್ಘಾಟನೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಇನ್ನೂ ಶಾಸಕರು ಶಿಷ್ಠಾಚಾರವನ್ನು ಸರಿಯಾಗಿ ಪಾಲಿಸುತ್ತಿಲ್ಲ ಇದಕ್ಕೆ ಉದಾಹರಣೆ ಇಂದು ಅಂಗನವಾಡಿ ಕಟ್ಟಡದ ಉದ್ಝಾಟನೆ ಕಾರ್ಯಕ್ರಮಗಳಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾದ ನನ್ನನ್ನು ಯಾಗಲಿ,ಆ ಭಾಗದ ತಾಲ್ಲೂಕು ಪಂಚಾಯಿತಿ ಸದಸ್ಯರನ್ನಾಗಲಿ ಆಹ್ವಾನಿಸಲಿಲ್ಲ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಇನ್ನೂ ಗ್ರಾ.ಪಂ ಮಾಜಿ ಅದ್ಯಕ್ಷ ಸಾಧಿಕ್ ಪಾಷ ಮಾತನಾಡಿ, ನಾನು ಉಪಾಧ್ಯಕ್ಷ ಕಾಲದಲ್ಲಿ ಸಂಸದೆ ಸುಮಲತಾ ರವರು ಕಾರ್ಯಕ್ರಮದ ದಿನಾಂಕ ನಿಗದಿ ಪಡಿಸಿದ ದಿನಾಂಕದಂದು ಉದ್ಘಾಟಿಸಲು ಶಿಷ್ಠಾಚಾರದ ಮೂಲಕ ಶಾಸಕರನ್ನು ಆಹ್ವಾನಿಸಿದ್ದೆವು ಆದರೆ ಅಂದೇ ಸಂಸದೆಯವರಿಗೆ ಕೋವಿಡ್ ಯಾಗಿದ್ದು ನೀವೇ ಮಾಡಿ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಉದ್ಘಾಟನೆ ಮಾಡಲಾಯಿತು.ಅಂತೆಯೇ ಕಚೇರಿ ಪ್ರಾರಂಭವಾಗಿ ಸಿಬ್ಬಂದಿಗಳು ನಿನ್ನೆಯವರೆಗೂ ಕಾರ್ಯನಿರ್ವಹಿಸುತ್ತಿದ್ದರು.ಈಗ ಏಕಾಏಕಿ ಬೀಗಹಾಕಿ ಹಳೆಯ ಕಚೇರಿಯಲ್ಲಿ ಕೆಲಸನಿರ್ವಹಿಸುತ್ತಿದ್ದಾರೆ.ಈ ಕೂಡಲೇ ಹೊಸ ಕಟ್ಟಡದಲ್ಲಿ ಕೆಲಸ ನಿರ್ವಹಿಸಬೇಕು ಇಲ್ಲದಿದ್ದರೆ ತಾಲ್ಲೂಕು ಪಂಚಾಯಿತಿ ತದನಂತರ ಜಿ.ಪಂಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರಿಸಿದರು.ಇದೇ ವೇಳೆ ಹಳೆಯ ಕಚೇರಿಗೂ ಬೀಗ ಜಡಿಯಲು ಪ್ರತಿಭಟನಾಕಾರರು ಯತ್ನಿಸಿದರು.ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಾಧು, ತಾ.ಪಂ ಸದಸ್ಯರಾದ ವಿಶ್ವಾಸ್,ನಾಗೇಶ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುಂದರ್ ರಾಜ್, ದೇವರಾಜು, ಉಪಾಧ್ಯಕ್ಷ ಶಿವಕುಮಾರ್,ದೊಡ್ಡಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment