ಕೊರೋನ ಮುಕ್ತ ಪಾವಗಡ ಮಾಡಲು ಸಾರ್ವಜನಿಕರು ಸಹಕರಿಸಬೇಕು – ಕೆ.ಆರ್.ನಾಗರಾಜ್.!

ಪಾವಗಡ : ತಾಲ್ಲೂಕಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಭಾಗದ ಸಾರ್ವಜನಿಕರು ಕೈ ಜೋಡಿಸಬೇಕಾದ ಪರಿಸ್ಥಿತಿ ಉದ್ಭವಗೊಂಡಿದೆ. ಪಾವಗಡ ಗಡಿ ಪ್ರದೇಶವಾದ ಕಾರಣ ಆಂಧ್ರದಿಂದ ಹೆಚ್ಚು ಜನರು ದಿನನಿತ್ಯ ವ್ಯಾಪಾರ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಬರುವ ವಾಡಿಕೆ ಇರುವುದರಿಂದ ಕೊರೋನ ಪ್ರಕರಣಗಳು ತಡೆಗಟ್ಟಲು ನಮ್ಮ ಇಲಾಖೆ ಹಾಗೂ ಪುರಸಭೆ, ಪೋಲೀಸ್ ಇಲಾಖೆ ವತಿಯಿಂದ ಕರ ಪತ್ರ ಮೂಲಕ ಸಾರ್ವಜನಿಕರಿಗೆ ಅರಿವು ನೀಡಲಾಗುತ್ತಿದೆ. ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುತ್ತಿದ್ದ ಸಂತೆಯನ್ನು ಕೃಷಿ ಮಾರುಕಟ್ಟೆಗೆ ನಿಗದಿ ಮಾಡಲಾಗಿದೆ. ಮುಂದಿನ ಸಂತೆ ವಹಿವಾಟು ಅಲ್ಲಿಯೇ ನಡೆಯಲಿದೆ. ಸಾರ್ವಜನಿಕ ತಮ್ಮ ತಮ್ಮ ಹಾಗೂ ಕುಟುಂಬ ಆರೋಗ್ಯ ಕಾಪಡುವಲ್ಲಿ ಕೊರೋನಾ ಸೋಂಕಿನಿಂದ ತಡೆಯಲು ಮಾಸ್ಕ್ ಹಾಗೂ ಅಂತರ ಕಾಯ್ದುಕೊಳ್ಳಲು ಮುಂದಾಗಬೇಕು ಹಾಗೂ ಇತರರಿಗೂ ಸಹ ಅರಿವು ತರುವಂತಹ ಕೆಲಸ ಅಗಬೇಕು ಎಂದು ಜನತಾ ವಾಹಿನಿಗೆ ತಿಳಿಸಿದ್ದರು.

ವರದಿ- ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment