ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ದ ಘೋಷಣೆ..!

ಮಳವಳ್ಳಿ : ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಹಲಗೂರು ಹೋಬಳಿ ಕಾವೇರಿ ಕೃಷಿ ಹೋರಾಟ ಸಮಿತಿ ವತಿಯಿಂದ ಕಾಗೇಪುರ ಗ್ರಾಮದ ಮುಖ್ಯ ಕಾರ್ಯಪಾಲಕ ಅಭಿಯಂತರು ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಮಳವಳ್ಳಿ ತಾಲ್ಲೂಕು ಕಾಗೇಫುರ ಗೇಟ್ ಬಳಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾಧ್ಯಕ್ಷರಾದ ಎಂ ಪುಟ್ಟ ಮಾದು ನೇತೃತ್ವದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.ಇನ್ನೂ ತಾಲ್ಲೂಕು ಅಧ್ಯಕ್ಷರಾದ ಬಿ.ಎಂ ಶಿವಮಲ್ಲಯ್ಯ ಮಾತನಾಡಿ ಇಗ್ಗಲೂರು ಬ್ಯಾರೇಜ್ ನಿಂದ ನೀರು ಹರಿಸುವ ಹಲಗೂರು ಹೋಬಳಿಯ ಕಾಲುವೆಗಳ ಹೂಳನ್ನು ಉದ್ಯೋಗ ಖಾತ್ರಿ ಕೂಲಿಕಾರರ ಮೂಲಕ ತೆಗೆಸಿ ನೀರು ಬಿಡಬೇಕು ಕನಿಷ್ಠ ತಿಂಗಳಿಗೊಂದು ಬಾರಿ ಟೀಕೆಯಲ್ಲಿ ಭಾಗದ ರೈತರು ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ದಲಿತರೆಂಬ ಕಾರಣದಿಂದ ನೀರು ಬಿಡದೆ ನಿರಾಕರಿಸುವವರ ಮೇಲೆ ಕ್ರಮ ಕೈಗೊಂಡು ಆಗಿರುವ ನಷ್ಟ ಪರಿಹಾರ ಭರಿಸಬೇಕು ಎಂದರು .ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಆಶೋಕರವರಿಗೆ ಪ್ರತಿಭಟನಾಕರರು ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲಾಧ್ಯಕ್ಷ ಪುಟ್ಟಮಾಧು, ಜಿಲ್ಲಾ ಉಪಾಧ್ಯಕ್ಷ ಕೆ ಬಸವರಾಜು, ತಾಲ್ಲೂಕು ಅದ್ಯಕ್ಷ ಶಿವಮಲ್ಲಯ್ಯ, ರಾಜಮ್ಮ ಶುಭಾವತಿ ರಾಮಣ್ಣ ಶಿವಕುಮಾರ್ , ಪಾಪಣ್ಣ ಮಹದೇವಮ್ಮ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು .

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment