ಕೊರೊನಾ ಜಾಗೃತಿ ಮೂಡಿಸಿದ ಉಪನಗರ ಪೋಲಿಸ್ ಠಾಣೆ ಸಿಬ್ಬಂದಿ!!

ಹುಬ್ಬಳ್ಳಿ: ಹುಬ್ಬಳ್ಳಿ ಉಪನಗರ ಪೋಲಿಸ್ ಠಾಣೆ ವತಿಯಿಂದ ನಗರದಲ್ಲಿ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸಲಾಯಿತು. ನಗರದ ಚನ್ನಮ್ಮ ವೃತದಲ್ಲಿ ಸಾರ್ವಜನಿಕರಿಗೆ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ ವಿತರಣೆ ಮಾಡಿದರು, ನಂತರ ಮಾಸ್ಕ್ ನ್ನು ಕಡ್ಡಾಯವಾಗಿ, ಧರಿಸಿ ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳಿ, ಆಗಾಗ ಕೈಗಳನ್ನು ಸ್ಯಾನಿಟೈಸರನಿಂದ ತೊಳೆಯಿರಿ, ಕೆಮ್ಮು ನೆಗಡಿ ಜ್ವರ ಇರುವಂತಹ ವ್ಯಕ್ತಿಗಳಿಂದ ದೂರ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮಕ್ಕಳು, ವಯೋವೃದ್ದರ ಬಗ್ಗೆ ಜಾಗೃತ ವಹಿಸಿರಿ ಎಂಬ ನಾಮ ಫಲಕದೊಂದಿಗೆ ರ್ಯಾಲಿ ಮುಖಾಂತರ ಕೊರೊನಾ ಜಾಗೃತಿ ಮೂಡಿಸಿದರು.ಇದೇ ಸಂದರ್ಭದಲ್ಲಿ ಉಪನಗರ ಠಾಣೆ ಎ.ಸಿಪಿ ಶಂಕರ್ ರಾಗಿ,ಇನ್ಸ್ಪೆಕ್ಟರ್ ಸುಂದರೇಶ್ ಹೊಳೆನ್ನವರ್, ಅಶೋಕ ಬಿಎಸ್ಪಿ,ಪಿಎಸ್ ಐ ಸಿತಾರಂ ಲಮಾಣಿ’ ಇತರ ಪೋಲಿಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment