ಮೈಕ್ರೋ ಫೈನಾನ್ಸ್ ವಿರುದ್ಧ ಪ್ರತಿಭಟಿಸಲು ಸಜ್ಜು..!

ಮಾರ್ಚ್ 23 ರ ರಂದು ಕೇಂದ್ರ ಸರ್ಕಾರದಿಂದ ಎಲ್ಲೇಡೆ ಸಂಪೂರ್ಣ ಲಾಕ್ ಡೌನ್ ಮಾಡಬೇಕಾಗಿ ಆದೇಶ ಹೊರಡಿಸಿದ್ದು, ಸರ್ಕಾರ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸದಿದ್ದರೂ ಜನ ಸಾಮಾನ್ಯರು ಹೇಗೋ ಜೀವನ ಸಾಗಿಸುತ್ತ ಇದ್ದರು.ಆದರೆ ಇತ್ತೀಚೆಗೆ ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ನಂತಹ ಸಣ್ಣ ಫೈನಾನ್ಸ್ ಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ.ಲಾಕ್ ಡೌನ್ ನ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಲ ವಸೂಲಾತಿಯನ್ನು ಕಡ್ಡಾಯಗೊಳಿಸಬಾರದೆಂದು ಆದೇಶ ಹೊರಡಿಸಿತ್ತು, ಸರ್ಕಾರ ನಿಯಮಗಳಿಗೆ ಕಿವಿ ಕೊಡದ ಮೈಕ್ರೋ ಫೈನಾನ್ಸ್ ಅಧಿಕಾರಿಗಳು ಮಹಿಳೆಯರು ಪಡೆದಿರುವ ಸಾಲದ ಕಂತುಗಳನ್ನು ಬಲವಂತವಾಗಿ ಮಾನಸಿಕ ಹಿಂಸೆ ಕೊಟ್ಟು ವಸೂಲಿ ಮಾಡಲು ಮುಂದಾಗಿವೆ.ಇದರಿಂದ ಬೇಸತ್ತ ಮಹಿಳೆಯರ ಪರವಾಗಿ ದ್ವನಿ ಎತ್ತಲು ನಮ್ಮ ಮಹಿಳಾ ಜನವಾದಿ ಸಂಘಟನೆ ತೀರ್ಮಾನಿಸಿದ್ದು, ಕೂಡಲೇ ಮೈಕ್ರೋ ಫೈನಾನ್ಸ್ ಗಳು ಕಡ್ಡಾಯವಾಗಿ ವಸೂಲಿ ಮಾಡುವುದನ್ನು ನಿಲ್ಲಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಕರೆ ಕೊಡುವುದಾಗಿ ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಸಂಚಾಲಕರಾದ ಶ್ರೀದೇವಿ ಮುಳುಬಾಗಿಲಿನ ಶ್ರೀನಿವಾಸಪುರದಲ್ಲಿ ನಡೆಸಿದ ಸಭೆಯಲ್ಲಿ ತಿಳಿಸಿದ್ದಾರೆ.ಇನ್ನೂ ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರಿ, ಪ್ರತಿನಿಧಿ ಅಶ್ವಿನಿ, ಸಹ ಸಂಚಾಲಕರಾದ ಉಮಾದೇವಿ, ಮಂಜುಳಾ ಸೇರಿದಂತೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ವರದಿ- ವಿ.ರಾಮಕೃಷಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Please follow and like us:

Related posts

Leave a Comment