ರೈತನಿಗೆ ಗಾಯದ ಮೇಲೆ ಬರೆ ಎಳೆದ ಮಳೆರಾಯ..!

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವಾಡೇ ಗ್ರಾಮದ ಪಂಡಿತ್ ನಾಗಪ್ಪಅವಟಿ ಎಂಬುವರಿಗೆ ಸೇರಿದ 3 ಏಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದು, ನಿನ್ನೆ ಗಾಳಿ ಮಳೆಗೆ ಲಕ್ಷಾಂತರ ರೂ. ಕಬ್ಬು ಬೆಲೆ ಹಾನಿಯಾಗಿದೆ.ಸುಮಾರು 3 ರಿಂದ 4 ಲಕ್ಷ ರೂಪಾಯಿ ಸಾಲ ಮಾಡಿ ಬೆಳೆಗಾಗಿ ಖರ್ಚು ಮಾಡಿದ್ದರು,ಆದ್ರೆ ಈಗಾ ಮಳೆಯಿಂದ ಬೆಳೆ ಕಳೆದುಕೊಂಡ ರೈತಾ ಕಂಗಾಲಾಗಿದ್ದಾನೆ.ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಾ ಇದ್ದವಿ, ಆದ್ರೆ ಈಗಾ ಕೈಗೆ ಬಂದಾ ತುತ್ತು ಬಾಯಿಗೆ ಬರದಂತಾಗಿದೆ. ಜೀವನ ನಡೆಸುವುದಾದ್ರೂ ಹೇಗೆ ಎಂದು ರೈತ ತನ್ನ ಅಳಲು ತೊಡಿಕೊಂಡಿದ್ದು, ಸರ್ಕಾರ ಸಹಾಯಕ್ಕೆ ಬರಬೇಕು ಎಂದು ಕೇಳಿಕೊಂಡಿದ್ದಾರೆ.

ವರದಿ-ಶಂಕರ್ ಲಿಂಗಾ ಎಕ್ಸ್ ಪ್ರೆಸ್ ಟಿವಿ ಇಂಡಿ

Please follow and like us:

Related posts

Leave a Comment