ದೌರ್ಜನ್ಯಕ್ಕೆ ವಳಗಾದ ದಲಿತ ಕುಟುಂಬಕ್ಕೆ ಪರಿಹಾರ ನೀಡಿ- ಗುರುನಾಥ ಉಳಿಕಾಶಿ

ಹುಬ್ಬಳ್ಳಿ: ಕುಂದಗೋಳ ತಾಲೂಕ ವೀಠ್ಲಾಪುರ ಗ್ರಾಮದಲ್ಲಿ ಸುವರ್ಣಿಯರು ತಮ್ಮ ಗ್ರಾಮದ ದೇವಸ್ಥಾನಕ್ಕೆ ಸಂಬಂಧಿಸಿದ ಶವವನ್ನು ಹೊರುವ ಸಿದಗಿಯನ್ನು ಇಡಲು ಲಕಮವ್ವ್ ಹರಿಜನ ಎನ್ನುವರ ಮನೆ ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಹೋರಾಟಕ್ಕೆ ಇಳಿದ ತಕ್ಷಣ ಅಂದಿನ ಸಮ್ಮಿಶ್ರ ಸರ್ಕಾರ ನೊಂದ ಕುಟುಂಬಕ್ಕೆ ಪರಿಹಾರವಾಗಿ ಮನೆ, ಭೂಮಿ ನೀಡುವುದಾಗಿ ಭರವಸೆ ನೀಡಿತ್ತು ಇದುವರೆಗೆ ಪರಿಹಾರ ನೀಡಿಲ್ಲ ಆದ್ದರಿಂದ 15 ದಿನ ಪರಿಹಾರ ನೀಡಲು ಜಿಲ್ಲಾ ಆಡಳಿತಕ್ಕೆ ಗಡವು ನೀಡುತ್ತೇವೆ, ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತೇ ಎಂದು ಗುರುನಾಥ ಉಳಿಕಾಶಿ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಂದಗೋಳ ತಾಲೂಕ ವೀಠ್ಲಾಪುರ ಗ್ರಾಮದಲ್ಲಿ 15 ಕ್ಕೂ ಹೆಚ್ಚು ಜನ್ ಸವರ್ಣಿಯರ ಲಕಮವ್ವ್ ಹರಿಜನ ಅವರ ಅವರ ಮನೆಯ ಮನೆ ತೆರವುಗೊಳಿಸಿ ಕುಟುಂಬದ ಎಲ್ಲರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಊರಲ್ಲಿದ್ದರೆ ಜೀವಂತ ಸುಟ್ಟುಹಾಕುವುದಾಗಿ ಧಮಕಿಹಾಕಿದನ್ನು ಖಂಡಿಸಿ ಪ್ರತಿಭಟನೆ ಮಾಡಿದ ತಕ್ಷಣ ಪ್ರಕರಣ ಧಾಖಲಿಸಿ ಸಮ್ಮಿಶ್ರ ಸರ್ಕಾರ್ ಇರವ ಅವಧಿಯಲಿ ದೌರ್ಜನ್ಯಕ್ಕೆ ವಳಗಾದ ಕುಟುಂಬಕ್ಕೆ ಪರಿಹಾರವಾಗಿ ಮನೆ ಭೂಮಿ ನೀಡುವ ಭರವಸೆ ನೀಡಿದ್ದರು. ಅದರೆ ಬದಲಾದ ಸರ್ಕಾರದಲ್ಲಿ ದೌರ್ಜನ್ಯ ನಡೆದು 18 ತಿಂಗಳು ಕಳೆದರು ಪರಿಹಾರ ದೊರೆತಿಲ್ಲ ಹಾಗು ದೌರ್ಜನ್ಯ ಒಳಗಾದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಸಾಕ್ಷಿಯಾಗಿದೆ ಹಾಗು ಊರಿನಲ್ಲಿ ಸತ್ತ ನಾಯಿ ಹಂದಿ ತಂದು ಇದೆ ಸ್ಥಳದಲ್ಲಿ ಬಿಸಾಕುತ್ತಾರೆ ಇಂತಹ ದೌರ್ಜನ್ಯ ನಡೆದರು ತಾಲೂಕ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಕಣ್ಣು ಮುಚ್ಚಿ ಕುಳುತಿದೆ ಎಂದು ಆರೋಪಿಸಿದರು ಇದನ್ನು ತೀವ್ರವಾಗಿ ಖಂಡಿಸಿ 15 ದಿನದೊಳಗೆ ದೌರ್ಜನ್ಯಕ್ಕೆ ವಳಗಾದ ಕುಟುಂಬಕ್ಕೆ ಪರಿಹಾರ ನೀಡದಿದ್ದರೆ ಕುಂದಗೋಳ ತಹಶೀಲ್ದಾರರ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಮಾಡುವುದಾಗಿ ಗುರುನಾಥ್ ಉಳಿಕಾಶಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಲಕಮವ್ವ್ ಹರಿಜನ, ಯಲಪ್ಪಾ ಹರಿಜನ,ಉಪಸ್ಥಿತರಿದ್ದರು.

ವರದಿ- ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment