ತಾಲೂಕು ಮಟ್ಟ-ಗ್ರಾಮೀಣ ಮಟ್ಟದಲ್ಲಿರುವ ಪತ್ರಕರ್ತರಿಗೂ ಆಯುಷ್ಮಾನ್ ಯೋಜನೆ ನೀಡಬೇಕೆಂದು ಮನವಿ…!

ಮುದ್ದೇಬಿಹಾಳ: ರಾಜ್ಯದಲ್ಲಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಪ್ರತಿಯೊಂದು ಸಂದರ್ಭದಲ್ಲಿಯೂ ಹಗಲು-ರಾತ್ರಿಯೆನ್ನದೆ ಶ್ರಮವಹಿಸುತ್ತ ಬಂದಿದ್ದು ಕೋವಿಡ್-19 ಸಂದರ್ಭದಲ್ಲಿ ಕರುಣಾ ಕಾರ್ಯಗಳಾಗಿ ಕೆಲಸ ಮಾಡಲಾಗಿದೆ. ಈಗಾಗಲೇ ಸರ್ಕಾರವು ಜಿಲ್ಲಾಮಟ್ಟದ ಪತ್ರಕರ್ತರಿಗೆ ಆಯುಷ್ಮಾನ್ ಭಾರತ ಕೊಡುತ್ತಿರುವುದು ಸ್ವಾಗತ ಇದರಂತೆ ತಾಲೂಕು ಮಟ್ಟದಲ್ಲಿ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಬಸ್ ಪಾಸ್ ,ನಿವೇಶನ ಹಾಗೂ ಸರಕಾರದ ಇನ್ನೇತರ ಸೌಲಭ್ಯಗಳು ಗ್ರಾಮೀಣ ಭಾಗದಲ್ಲಿ ಸಿಗುವಂತಾಗಲಿ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮುದ್ದೇಬಿಹಾಳ ತಾಲೂಕು ದಂಡಾಧಿಕಾರಿ ಜಿಬಿ ಮಳಗಿ ರವರಿಗೆ ಮುದ್ದೇಬಿಹಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಅಮೀನ್ ಮುಲ್ಲಾ ಅವರು ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬೀದಿ ವಡವಡಗಿ ತಾಲೂಕ ಉಪಾಧ್ಯಕ್ಷರಾದ ಗುರುನಾಥ್ ಕತ್ತಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದು ಚಲವಾದಿ ಸಹ ಕಾರ್ಯದರ್ಶಿಗಳಾದ ಲಾಳೆಮಶಾಕ್ ನದಾಫ ಖಜಾಂಚಿ ಪರಶುರಾಮ್ ಕೊಣ್ಣೂರ್ ಸದ್ದಾಮ್ ನದಾಫ್ ಶಿವು ಕರಾಟೆ ರವಿ ನಂದೆಪ್ಪನವರ್ ಸಾಗರ ಉಕ್ಕಲಿ ಉಪಸ್ಥಿತರಿದ್ದರು.

ವರದಿ- ಅಮೀನ್ ಸಾಬ್ ಎಕ್ಸ್ ಪ್ರೆಸ್ ಟಿವಿ ಮುದ್ದೇಬಿಹಾಳ

Please follow and like us:

Related posts

Leave a Comment