ಮಳೆಯಿಂದಾ ಹಾನಿಯಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ..!

ಕಲಬುರಗಿ: ಕಲಬುರುಗಿ ಜಿಲ್ಲೆಯಲ್ಲಿ ಎರಡು ದಿನದಿಂದ ಸುರಿದ ಭಾರಿ ಮಳೆಗೆ ಆಳಂದ ತಾಲ್ಲೂಕಿನಲ್ಲಿರುವ ಕೋರಳ್ಳಿ ಅಮರ್ಜಾ ಡ್ಯಾಮ ಭರ್ತಿಯಾಗಿದ್ದರಿಂದ ಎಲ್ಲ ಗೇಟ್ ತೆರೆದು ನೀರು ಬಿಡಲಾಗಿದೆ .ಇದರಿಂದ ಹೆಚ್ಚು ನೀರು ಹರಿದು ಬಂದಿರುವದರಿಂದ ಭೂಸುನೂರ ಮತ್ತು ಕೋರಳ್ಳಿ ಗ್ರಾಮಗಳ ರಸ್ತೆಗಳು ಮತ್ತು ಹೊಲಗಳು ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ ಇದರಿಂದ ರೈತರು ಕಣ್ಣಿರು ಸುರಿಸುವಂತಾಗಿದೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರು ಶ್ರೀ ಗುರುಶಾಂತಗೌಡ ಶಾಲಿವಾಹನ ಪಾಟೀಲ,ಜಿ.ಪಂ.ಸದಸ್ಯ ಹರ್ಷಾನಂದ ಗುತ್ತೇದಾರ ಹಾಗೂ ಆಳಂದ ತಾಲ್ಲೂಕಿನ ತಹಶಿಲ್ದಾರರ ಯಲ್ಲಪ, ಸುಬೆದಾರ ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆಯ ಉಪ ನಿರ್ದೇಶಕರು, PWD,ಇಲಾಖೆ ಜಿಲ್ಲೆಯ ಅಧಿಕಾರಿಗಳು, ತಾಲ್ಲೂಕಿನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಹಾನಿಯಾದ ರೈತರಿಗೆ ಸರಕಾರದಿಂದ ಬೆಳೆ ಪರಿಹಾರ ಒದಗಿಸುತ್ತೆವೆ. ಮತ್ತು ಹೋಲಗಳಲ್ಲಿರುವ ಬಾವಿ ಮುಚ್ಚಿರುವುದರಿಂದ ಕಂದಾಯ ಇಲಾಖೆಯಿಂದ ಹಣ ಒದಗಿಸುತ್ತೆವೆ, ಬೆಳೆ ಕೋಚ್ಚಿ ಹೋಗಿರುವುದರಿಂದ ತಕ್ಷಣ ಸರ್ವೆ ಮಾಡಿಸಿ ಪರಿಹಾರ ನೀಡಲು ಸೂಚಿದರು.

ವರದಿ-ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Please follow and like us:

Related posts

Leave a Comment