ರಸ್ತೆಗೆ ಬಿಡಾಡಿ ದನಗಳು ಬಿಟ್ಟರೆ ಎಚ್ಚರಿಕೆ- ಆರ್ .ವಿರೂಪಾಕ್ಷ ಮೂರ್ತಿ..!

ಸಿಂಧನೂರು: ರಸ್ತೆಗೆ ಬಿಡಾಡಿ ದನಗಳು ಬಿಟ್ಟರೆ ಅವುಗಳನ್ನು ಗೋಶಾಲೆಗೆ ಹಾಕಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ ಸಿಂಧನೂರು ತಾಲೂಕಿನ ನಗರಸಭೇ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಎಚ್ಚರಿಕೆ ನೀಡಿದರು. ನಗರದ ಪ್ರಮುಖ ಬದಿಗಳಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ, ತಳ್ಳು ಬಂಡಿ ವ್ಯಾಪಾರಸ್ಥರಿಗೆ, ತೀವ್ರ ತೊಂದರೆ ಯಾಗುತ್ತಿದ್ದು. ಕೂಡಲೇ ಬಿಡಾಡಿ ದನಗಳ ಮಾಲೀಕರು ಅವುಗಳನ್ನು ತಮ್ಮ ಮನೆಯಲ್ಲಿ ಕಟ್ಟಿಕೊಳ್ಳಿ. ತಪ್ಪಿದಲ್ಲಿ ಇನ್ನೂ ಎರಡೂ ದಿನಗಳಲ್ಲಿ ಯಾವ ಮುಲಾಜಿಲ್ಲದೆ ಅವುಗಳನ್ನು ಜಪ್ತಿ ಮಾಡಿ ಅವುಗಳನ್ನು ಗೋಶಾಲೆಗೆ ಬಿಡಲಾಗುತ್ತದೆ ಎಂದು ತಿಳಿಸಿದರು.

ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment