ತಿಂಗಳ ಹಸುಗೂಸು ಮಗುವಿನೊಂದಿಗೆ ಪರೀಕ್ಷೆ ಬರೆದ ತಾಯಿ..

ಹುಬ್ಬಳ್ಳಿ: ಕಲಿಯುವ ಮನಸ್ಸಿದ್ದರೆ ಎಂತಹ ಸಮಸ್ಯೆಗಳು ಎದುರಾದರೂ ಕಲಿಕೆ ಮುಖ್ಯ ಎಂಬುದನ್ನು ತಿಂಗಳ ಮಗುವನ್ನು ಮಡಿಲಲ್ಲಿ’ಇಟ್ಟುಕೊಂಡೇ ಮಹಿಳೆಯೊಬ್ಬರು ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದಾಳೆ. ಹೀಗೆ ಒಂದು ತಿಂಗಳಿನ ಮಗುವನ್ನು ತೊಟ್ಟಲಿನಲ್ಲಿ ತೂಗುತ್ತ, ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುತ್ತಿರುವ ಈಕೇ ಹೆಸರು ವೈಶಾಲಿ ವೆಂಕಟೇಶ ಮೊರಬದ, ಹುಬ್ಬಳ್ಳಿಯ ಗಂಗಾಧರ ನಗರದ ದೊಡ್ಡಕೇರಿ ನಿವಾಸಿ, ವರ್ಷದ ಹಿಂದೆ ಮದುವೆಯಾಗಿರುವ ಈಕೆ ಅದೆಷ್ಟೋ ಸಮಸ್ಯೆ ಎದುರಾದ್ರೂ ಓದುವುದನ್ನು ನಿಲ್ಲಿಸಲಿಲ್ಲ, ಸದ್ಯ ಒಂದು ತಿಂಗಳಿನ ಹಸುಕೂಸು ಜೊತೆಗೆವೈಶಾಲಿ ಧಾರವಾಡ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ಪರೀಕ್ಷೆ ಪ್ರಾರಂಭವಾದ ಹಿನ್ನಲೆಯಲ್ಲಿ ವಿಭಾಗಿಯ ಮುಖ್ಯಸ್ಥರ ಜೊತೆ ಮಾತನಾಡಿಕೊಂಡು ಅನುಮತಿ ಪಡೆದು ಪರೀಕ್ಷೆ ಬರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ವೈಶಾಲಿ ಓದಿಗಾಗಿ ತಾವು ಹೇಗೆ ಕಷ್ಟ ಪಡುತ್ತಾರೊ ಅದೇ ರೀತಿಯಾಗಿ ಕುಟುಂಬಸ್ಥರು ಕೂಡ ಅವರಿಗೆ ಬನ್ನುಲಬಾಗಿ ನಿಂತು ವೈಶಾಲಿ ಕನಸು ನನಸ್ಸು ಮಾಡಲು ಅಷ್ಟೇ ಅಲ್ಲದೆ ವೈಶಾಲಿ ಅವರ ಮುಂದಿನ ಓದಿಗಾಗಿ ಎಷ್ಟೆ ಕಷ್ಟ ಬಂದರು ಕೂಡ, ಅವಳ ಜೊತೆ ಇದ್ದು, ಅವರ ಮುಂದಿನ ಗುರಿ ತಲುಪಲು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಎಷ್ಟೋ ಮಹಿಳೆಯರು ಮದುವೆ ಆಗಿ ಮಕ್ಕಳಾದರೆ ಜೀವನ ಇಲ್ಲಿಗೆ ಮುಗಿಯಿತು ಎನ್ನುವರ ಮಧ್ಯದಲ್ಲಿ ವೈಶಾಲಿ ಅವರು ಮಾದರಿಯಾಗಿದ್ದಾರೆ. ಒಂದು ತಿಂಗಳಿನ ಮಗುವನ್ನು ಇಟ್ಟುಕೊಂಡು ಪರೀಕ್ಷೆ ಬರೆದ ಇವರಿಗೆ ತಮ್ಮ ಮುಂದಿನ ಜೀವನದ ಗುರಿ ಆದಷ್ಟು ಬೇಗ ತಲುಪಲಿ ಎನ್ನುವುದು ನಮ್ಮೆಲ್ಲ ಆಶೆಯ.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment