ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಯಕ್ಷಿಂತಿ ಗ್ರಾಮ.

ಶಹಾಪುರ : ಸರಿಯಾದ ರಸ್ತೆಗಳಿಲ್ಲ,ಬೀದಿ ದೀಪಗಳಿಲ್ಲ, ಕುಡಿಯಲಿಕ್ಕೆ ಶುದ್ಧ ನೀರಂತೂ ಮೊದಲೇ ಇಲ್ಲ,ಒಟ್ಟಾರೆ ಹೇಳಬೇಕಾದರೆ ತಾಲ್ಲೂಕಿನ ಯಕ್ಷಿಂತಿ ಗ್ರಾಮ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣ ವಂಚಿತಗೊಂಡಿದೆ ಯಕ್ಷಂತಿ ಎಂದು ನಿಂಗಣ್ಣ ಕರಡಿ ಹೇಳಿದರು.ಗ್ರಾಮದ ಚರಂಡಿ ನೀರು ರಸ್ತೆಯ ಮೇಲೆ ಹರಿದಿದ್ದು ಅಲ್ಲದೆ ಕೆಲವೊಂದು ಮನೆಗಳಿಗೂ ನುಗ್ಗುತ್ತವೆ, ಕುಡಿಯುವ ನೀರಿನೊಂದಿಗೆ ಆಗಾಗ ಕಲುಷಿತ ಚರಂಡಿ ನೀರು ಕೂಡ ಬರುತ್ತವೆ ಇಂಥ ಪರಿಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಹರಿದು ಬಂದ ಚರಂಡಿ ನೀರು ನಿಂತಲ್ಲೇ ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದೆ, ಜೊತೆಗೆ ರೈತರ ಜಮೀನಿಗೆ ಕೊಳಚೆ ನೀರು ನುಗ್ಗಿ ಕೆಸರು ಗದ್ದೆಯಂತಾಗಿ ಗಿಡಗಂಟೆಗಳು ಬೆಳೆದಿವೆ.ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ತುಂಬಾ ಬೇಸರದಿಂದ ತಮ್ಮ ಅಳಲನ್ನು ತೋಡಿಕೊಂಡರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment