ಜಲಾವೃತಗೊಂಡ ಗ್ರಾಮಗಳಿಗೆ ಮಾಜಿ ಶಾಸಕ ಭೇಟಿ.

ಶಹಾಪುರ:ನದಿಯ ನೀರು ಗ್ರಾಮಗಳಿಗೆ ನುಗ್ಗಿ ಸಂಪೂರ್ಣ ಜಲಾವೃತಗೊಂಡಿರುವ ಹೊಸುರ, ರೋಜಾ, ಹುರುಸಗುಂಡಗಿ ಗ್ರಾಮಗಳಿಗೆ ಶಹಾಪುರದ ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಭೇಟಿ ನೀಡಿ ಪರಿಶೀಲಿಸಿದರು. ನಿರಾಶ್ರಿತ ಜನರಿಗೆ ಸಂಬಂಧಪಟ್ಟ ಎಲ್ಲ ಸೌಲಭ್ಯಗಳನ್ನು ಕೂಡಲೇ ಸರ್ಕಾರದಿಂದ ಪೂರೈಸಲಾಗುವುದು ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಹೆದರದಿರಿ ಎಂದು ಅವರಲ್ಲಿ ಧೈರ್ಯ ತುಂಬಿದರು. ಮನೆ ಮಾರು ಕಳೆದು ಕೊಂಡಿರುವ ನಿರಾಶ್ರಿತರಿಗೆ ಪರಿಹಾರ ವಿತರಣೆಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment