ಶಿಕ್ಷಕರ ಸಮಸ್ಯೆಗಳನ್ನು ಬಗ್ಗೆ ಹರಿಸಿದ ಸರ್ಕಾರ ಎಂದರೇ ಅದುವೇ ಜೆಡಿಎಸ್-ಚೌಕರೆಡ್ಡಿ ತುಪಾಲಿ..!

ಪಾವಗಡ: ರಾಜ್ಯದಲ್ಲಿ ಇಲ್ಲಿಯವರೆಗೂ ಶಿಕ್ಷಕರ ಸಮಸ್ಯೆಗಳನ್ನು ಬಗ್ಗೆ ಹರಿಸಿದ ಸರ್ಕಾರ ಎಂದರೇ ಅದು ಜಾತ್ಯಾತೀತ ಜನತಾದಳ ಪಕ್ಷದಿಂದ ಸಾದ್ಯವಾಗಿದೆ ಎಂದು ಚೌಡರೆಡ್ಡಿ ತುಪಾಲಿ ವ್ಯಕ್ತಪಡಿಸಿದರು. ಪಾವಗಡ ಪಟ್ಟಣದ ಕಣಿವೆ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಆಗ್ನೇಯ ಪಧವಿದೇರ ಕ್ಷೇತ್ರದ ಚುನಾವಣೆ ಪ್ರಚಾರ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತುಪಾಲಿಯವರು ಇತಿಹಾಸದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿದಂತಹ ಏಕೈಕ ಪಕ್ಷ ಎಂದರೆ ಅದು ನಮ್ಮ ಜೆಡಿಎಸ್ ಪಕ್ಷದಿಂದ ಸಾದ್ಯವಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ನಮ್ಮ ಪಕ್ಷದ ಬಸವರಾಜ್ ಹೂರಟಿರವರ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳು ಮಾಡಿದ್ದೆವೆ. ಹಾಗೂ ಸಮಸ್ಯೆಗಳನ್ನು ಬಗೆಹರಿಸಿದ ನಿದರ್ಶನಗಳು ಸಹ ಇವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹ ಮತ ಇದ್ದರೆ ಮಾತ್ರ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಾದ್ಯ. ಹಲವು ಬಾರಿ ಪಕ್ಕದ ರಾಜ್ಯಗಳಲ್ಲಿ ಶಿಕ್ಷಕರಿಗೆ ನೀಡುತ್ತಿರುವ ಸವಲತ್ತುಗಳನ್ನು ಗಮನಿಸಿ ಅವುಗಳನ್ನು ನಮ್ಮ ರಾಜ್ಯ ಶಿಕ್ಷಕರ ಸಮಸ್ಯ ಹೋಗಲಾಡಿಸಲು ಮುಂದಾಗಬಹುದಿತ್ತು ಎಂದರು. ಎನ್ ಪಿ ಎಸ್ ತೆಗೆದು ಹಾಕಬೇಕೆಂದು ನಮ್ನ ಜೆಡಿಎಸ್ ಪ್ರನಾಳಿಕೆಯಲ್ಲಿ ಸೇರಿಸಲಾಗಿತ್ತು. ಶಿಕ್ಷಕರ ಸಮಸ್ಯೆಗಳ ಬಗೆ ಸದಾ ಹೋರಾಟ ಮಾಡಲು ನಾನು ಸಿದ್ದ ಎಂದರು. ಇದೇವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್. ಸಿ.ಅಂಜಿನಪ್ಪ ಮಾತನಾಡಿದರು.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು.ಇದೇ ವೇಳೆ ಜೆಡಿಎಸ್. ಪಕ್ಷದ ಮುಖಂಡರು ಹಾಗೂ ಶಿಕ್ಷಕರುಗಳು ಭಾಗವಹಿಸಿದ್ದರು.ಕೇಲವಂದು ಶಿಕ್ಷಕರುಗಳು ಹೋದ ಬಾರಿ ಗೆದ್ದ ಮೇಲೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಆರೋಪ ಮಾಡಿದರು.

ವರದಿ:ಇಮ್ರಾನ ಉಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ.

Please follow and like us:

Related posts

Leave a Comment