ರೈತರ ಬೆಳೆಗೆ ನುಗ್ಗಿದ ಭೀಮೆ ನದಿಯ ನೀರು..!

ವಿಜಯಪುರ: ಕರ್ನಾಟಕ-ಮಹಾರಾಷ್ಟ್ರದ ಎಡಬಿಡದೆ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಹಾಗೂ ಉಜನಿ ಜಲಾಶಯದಿಂದ ಭೀಮಾ ನದಿಗೆ ಐದು ಲಕ್ಷ ಕ್ಯೂಸೇಕ್ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಇಂಡಿ ತಾಲ್ಲೂಕಿನ ಭೀಮಾತೀರದ ಗ್ರಾಮಗಳ ರೈತರ ಹೊಲ ಗದ್ದೆಗಳು ಹಾಗೂ ಮನೆಗಳಿಗೇಲ್ಲ ನದಿ ನೀರು ನುಗ್ಗಿ, ಮನೆಗಳು ಹಾಗೂ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ರೈತರು ಕಬ್ಬು ಹಾಗೂ ತೊಗರಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಭೀಮೆಯ ಪ್ರವಾಹ ಮತ್ತೆ ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದ ರತ್ನಾಕರ ಬಿರಾದಾರ ಮಾತಾನಾಡಿ ಮನೆಗಳಿಗೆ ನದಿ ನೀರು ನುಗ್ಗಿ, ಪತ್ರಾಸ್ ಸೇಡ್ ಗಳು ಜಲಾವೃತಗೊಂಡಿವೆ.ರೈತರ ಬಾಳೆ ಬೆಳೆ, ಕಬ್ಬು, ಜೋಳ ಸೇರಿದಂತೆ ಬೆಳೆಗಳು ಸದ್ಯ ಭೀಮೆಯ ಪ್ರವಾಹದ ನೀರಲ್ಲಿ ನಿಂತು ರೈತರ ಹಾಗೂ ಜನರ ಬದುಕು ದುಸ್ತರವಾಗುತ್ತಿದೆ.ಕೂಡಲೇ ಸಂಬಂಧಿಸಿದ ಇಲಾಖೆಯವರು ವಾಸ್ತವ ಹಾನಿ ಬಗ್ಗೆ ವರದಿ ಮಾಡಿ ಶಾಶ್ವತ ಪರಿಹಾರ ಒದಗಿಸಬೇಕು ಇಂದು ತಹಶೀಲ್ದಾರ್ ಸಿ.ಎಸ್ ಕುಲಕರ್ಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಆಜೂರ, ಕಂದಾಯ ನಿರೀಕ್ಷಕ ಎಸ್.ಎ ಹಜೇರಿ, ಗ್ರಾ.ಪಂ ಪಿಡಿಒ ಎಮ್.ಆರ್ ಹಿರೇಕುರುಬರ, ಗ್ರಾಮ ಲೇಕ್ಕಾಧಿಕಾರಿ ಎಸ್.ಎ ಜಕಾತಿ ಮತ್ತಿತರರು ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಬಗ್ಗೆ ಜನರಿಂದ ಮಾಹಿತಿ ಪಡೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವದು ಕಾರ್ಯ ಮಾಡಿದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Please follow and like us:

Related posts

Leave a Comment