ವಿರೇಶ್ ಹಟ್ಟಿ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ- ವೆಂಕಟರಾವ್ ನಾಡಗೌಡ..!

ಸಿಂಧನೂರು : ನಗರದ ಪಿಡಬ್ಲುಡಿ ಕ್ಯಾಂಪ್ ನಲ್ಲಿ ತಮ್ಮ ನಿವಾಸದಲ್ಲಿ ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ ನಗರ ಸಭೆ ಅಧ್ಯಕ್ಷ ಸ್ಥಾನ ಎಸ್ ಟಿ ಮೀಸಲಾತಿ ಬಂದಿದ್ದನ್ನು ಗಮನಿಸಿ ಜೆಡಿಎಸ್ ಪಕ್ಷದ ವತಿಯಿಂದ ಇಂಜಿನಿಯರಿಂಗ್ ಪದವೀಧರೆಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆದ್ದುಕೊಂಡೆವು. ಆದರೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರು ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಅವರೊಂದಿಗೆ ಮೈತ್ರಿ ಸರ್ಕಾರ ಇರುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿ ಎಸ್ ಟಿ ಮೀಸಲಾತಿಯನ್ನು ಸಾಮಾನ್ಯಕ್ಕೆ ಬದಲಾವಣೆ ಮಾಡಿಕೊಂಡು ಬಂದರು. ನಾವು ಕೋರ್ಟಿನಲ್ಲಿ ಫೈಟ್ ಗೆದ್ದೆವು.ಆದರೆ ಬೆಂಗಳೂರು ಕೋರ್ಟಿನಲ್ಲಿ ದಾವೆ ಹೂಡಿದಾಗ ಸಾಮಾನ್ಯ ಮೀಸಲಾತಿ ಬಂದಿದ್ದು ನಾಳೆ ಚುನಾವಣೆ ನಡೆಯುವ ಸಾಧ್ಯತೆ ಉಂಟು ನಾವು ಯಾರನ್ನು ಸೆಳೆಯುವುದಿಲ್ಲ. ಕರೆಯುವುದೂ ಇಲ್ಲ ನಮ್ಮ ಪಕ್ಷದ ವತಿಯಿಂದ ನಗರಸಭೆಗೆ ಆಯ್ಕೆಯಾದ ವಿರೇಶ್ ಹಟ್ಟಿಯನ್ನು ಕಾಂಗ್ರೆಸ್ಸಿನ ಪಕ್ಷದವರೇ ಆಶೆ ಆಮಿಷ ಒಡ್ಡಿ ಕದ್ದುಕೊಂಡು ಹೋಗಿದ್ದಾರೆ. ಅವರು ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ. ಮತ್ತೆ ಮರಳಿ ಬರುತ್ತಾರೆ ಎಂದು ತಿಳಿಸಿದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment