ಶಿರವಾಳ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ..!

ಶಹಾಪುರ : ತಾಲ್ಲೂಕಿನ ಶಿರವಾಳ ಗ್ರಾಮದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸುತ್ತಲೂ ಜಾಲಿ ಮುಳ್ಳು ಕಂಟಿಗಳು ಬೆಳೆದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಅಲ್ಲದೆ ಸುತ್ತಮುತ್ತಲೂ ಸ್ವಚ್ಛತೆಯ ಪರಿಸರ ಕಾಣದೆ ಆಸ್ಪತ್ರೆಯೇ ರೋಗಗ್ರಸ್ಥವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವು ಆಂದೋಲಾ ಆರೋಪಿಸಿದ್ದಾರೆ.ರೋಗಿಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದರೆ ಇಲ್ಲಿ ಸರಿಯಾದ ಸೌಲಭ್ಯವಿಲ್ಲ, ವೈದ್ಯರಂತೂ ಮೊದಲೇ ಸಿಗಲ್ಲ, ಯಾರೊಬ್ಬರು ಸಿಬ್ಬಂದಿಗಳಿದ್ದರು ಸರಿಯಾಗಿ ಸ್ಪಂದಿಸಲ್ಲ, ಕುಳಿತುಕೊಳ್ಳಬೇಕಾದರೆ ಸರಿಯಾದ ಸ್ಥಳವಿಲ್ಲ,ಎತ್ತ ನೋಡಿದರತ್ತ ಜಾಲಿ ಮುಳ್ಳು ಕಂಟಿಗಳಿಂದ ಆವರಿಸಿಕೊಂಡಿದೆ ಕೂಡಲೇ ಆಸ್ಪತ್ರೆಯ ಆವರಣದ ಸುತ್ತಮುತ್ತಲೂ ಉತ್ತಮ ಪರಿಸರ ಕಾಪಾಡಬೇಕೆಂದು ಮನವಿ ಮಾಡಿಕೊಂಡರು. ಸಂಬಂಧಪಟ್ಟ ವೈದ್ಯಾಧಿಕಾರಿಗೆ ಕರೆ ಮಾಡಿ ವಿಚಾರಿಸಿದರೆ ಒಬ್ಬರ ಮೇಲೆ ಇನ್ನೊಬ್ಬರು ಹಾಕುತ್ತಿದ್ದಾರೆ, ಗ್ರಾಮ ಪಂಚಾಯಿತಿ ವತಿಯಿಂದ ಆಗಬೇಕಾದ ಕೆಲಸ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಪರಿಸರ ಮತ್ತು ಆರೋಗ್ಯದ ಬಗ್ಗೆ ಚಿಕಿತ್ಸೆ ನೀಡುವವೈದ್ಯರೇ ಈ ರೀತಿ ಮಾತನಾಡಿದರೆ ಇನ್ನೂ ರೋಗಿಗಳ ಪಾಡೇನು ಎಂಬುದು ಅರಿತುಕೊಳ್ಳಬೇಕಾದ ಅಗತ್ಯತೆಯಿದೆ.ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಹಾಗೆ ಇಲ್ಲಿ ಇಬ್ಬರು ವೈದ್ಯರಿದ್ದರೂ ರೋಗಿಗಳು ಪರದಾಡುವಂತಾಗಿದೆ.

ವರದಿ-ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment