ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ..!

ಬಂಗಾರಪೇಟೆ: ಬಂಗಾರಪೇಟೆಯ ಪುರಸಭೆಯ 9 ನೇ ಅವದಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರಾಗಿ ಗಂಗಮ್ಮ ರಂಗರಾಮಯ್ಯ ಮತ್ತು ಉಪಾಧ್ಯಕ್ಷರಾಗಿ ಪೋನ್ನಿ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಬಂಗಾರಪೇಟೆ ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು 27 ವಾರ್ಡ್ ಗಳಿದ್ದು ಇದರಲ್ಲಿ ಕಾಂಗ್ರೆಸ್ 20 ಸ್ಥಾನದಲ್ಲಿ ಜೆಡಿಎಸ್ 2 ಸ್ಥಾನದಲ್ಲಿ ಒಂದು ಸ್ಥಾನದಲ್ಲಿ ಬಿಜೆಪಿ ಪಕ್ಷೇತರು 4 ಸ್ಥಾನದಲ್ಲಿ ಗೆದಿದ್ದರು 4 ಪಕ್ಷೇತರು ಕಾಂಗ್ರೆಸ್ ಗೆ ಸೇರ್ಪಡೆಯಾದ ಕಾರಣ ಕಾಂಗ್ರೆಸ್ ನ ಒಟ್ಟು ಸ್ಥಾನ 24 ಸ್ಥಾನ ಪಡೆದಂತಾಯಿತು.ಈ ಬಾರಿ ಅಧ್ಯಕ್ಷಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳಾ ಮಿಸಲಾತಿ ನಿಗದಿಯಾಗಿತ್ತು.ಚುನಾಚಣೆ ಕಾರ್ಯನಿರ್ವಹಿಸಿದ್ದ ತಹಶಿಲ್ದಾರ್ ಮಾತನಾಡಿ ಅಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ರಂಗರಾಮಯ್ಯ ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಪೋನ್ನಿ ರಮೇಶ್ ಮಾತ್ರ ನಾಮ ಪತ್ರ ಸಲ್ಲಿಸಿದ್ದು ಬೇರೆ ಯಾರು ನಾಮ ಪತ್ರ ಸಲ್ಲಿಸದಾ ಕಾರಣ ಅಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ರಂಗರಾಮಯ್ಯ ಉಪಾಧ್ಯಕ್ಷ ಸ್ಥಾನಕ್ಕೆ ಪೋನ್ನಿ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶುಭಾಶಯ ಕೋರಿ ಮಾತನಾಡಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲಾ ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣ ಅಭಿವೃದ್ಧಿ ಗೆ ಶ್ರಮಿಸಬೇಕು.ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಶ್ರೀಧರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ, ಎಲ್ಲಾ ಪುರಸಭೆಯ ಸದಸ್ಯರು ಹಾಜರಿದ್ದರು.

ವರದಿ-ಎಕ್ಸ್ ಪ್ರೆಸ್ ಟಿವಿ ಬಂಗಾರಪೇಟೆ

Please follow and like us:

Related posts

Leave a Comment