ನಗರ ಸಭೆ ಸದಸ್ಯರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅವಿರೋಧ ಆಯ್ಕೆ.!

ಸಿಂಧನೂರು: ನಗರ ಸಭೆ ಸದಸ್ಯರ ಚುನಾವಣೆಯಿಂದ ಮೀಸಲಾತಿ ಗೊಂದಲದಿಂದ ಎರಡೂ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಚುನಾವಣೆಯಿಂದು ನಡೆದಿದೆ. ಕಾಂಗ್ರೆಸ್ ಪಕ್ಷ ವತಿಯಿಂದ ಒಟ್ಟು 20 ಸದಸ್ಯರು ಒಳಗೊಂಡರೆ. ಜೆಡಿಎಸ್ ಪಕ್ಷದಿಂದ 11 ಸದಸ್ಯರು ಆಯ್ಕೆ ಆಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆಯಲು 17 ಬಹುಮತ ಕೊರತೆ ಕಾರಣ ಜೆಡಿಎಸ್ ಪಕ್ಷವು ತನ್ನ ಯಾವುದೇ ಅಭ್ಯರ್ಥಿಗಳು ಚುನಾವಣೆಗೆ ಸ್ವರ್ಧೆ ಮಾಡದೇ ದೂರ ಸರಿದರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಮಲ್ಲಿಕಾರ್ಜುನ ಮಾಲಿ ಪಾಟೀಲ್ ಹಾಗೂ ಮುರ್ತುಜಾ ಸಾಬ್ ಅವರು ಚುನಾವಣೆಗೆ ಸ್ಪರ್ಧಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಮಾಲಿ ಪಾಟೀಲ್, ಉಪಾಧ್ಯಕ್ಷರಾಗಿ ಮುರ್ತುಜಾ ಸಾಬ್ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೊಂಡ ನಂತರ ನಗರಸಭೆ ಕಾರ್ಯಾಲಯದ ಮುಂಭಾಗ ಹಾಗೂ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದರು. ಈ ಸಂಧರ್ಭದಲ್ಲಿ ಚುನಾವಣೆ ಆಯುಕ್ತರಾಗಿ ಲಿಂಗಸುಗೂರ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ಶಾಸಕ ವೆಂಕಟರಾವ್ ನಾಡಗೌಡ, ತಹಶಿಲ್ದಾರ ಮಂಜುನಾಥ ಭೋಗಾವತಿ, ನಗರ ಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಪಿಎಸ್ಐಗಳಾದ ರಾಘವೇಂದ್ರ, ಎರಿಯಪ್ಪ, ಹುಲುಗಪ್ಪ ರಾಠೋಡ್, ಸೇರಿದಂತೆ ನಗರ ಸಭೆ ಸದಸ್ಯರು. ನಗರ ಸಭೆ ಸಿಬ್ಬಂದಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment