ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ರೈತರಿಗೆ 10ಸಾವಿರ ನೀಡ್ತಾಯಿದೆ- ಡಾ.ಸಿದ್ದರಾಮಯ್ಯ..!

ಭಾರತೀಯ ಜನತಾ ಪಾರ್ಟಿ, ಹಾಗೂ ರೈತ ಮೋರ್ಚಾ ವತಿಯಿಂದ ಕೇಂದ್ರ ಸರ್ಕಾರ ದ ಮಹತ್ವಾಕಾಂಕ್ಷೆಯ ಎಪಿಎಂಸಿ ತಿದ್ದುಪಡಿ ಮತ್ತು ಭೂ ಸ್ವಾಧೀನ ಕಾಯ್ದೆ ಪರ ರೈತ ಜಾಗೃತಿ ಅಭಿಯಾನ ಉದ್ಘಾಟನಾ ಕಾರ್ಯಕ್ರಮವನ್ನು ಮಳವಳ್ಳಿ ತಾಲ್ಲೂಕಿನ ಚಿಕ್ಕಮೂಲಗೂಡು ಗ್ರಾಮದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಡಾ.ಸಿದ್ದರಾಮಯ್ಯ, ಉದ್ಘಾಟಿಸಿ ಮಾತನಾಡಿ, ಕಳೆದ 70 ವರ್ಷದಿಂದ ಅಧಿಕಾರಿದಲ್ಲಿದ್ದವರು ರೈತರ ಬಗ್ಗೆ ಕಾಳಜಿ ಇರಲಿಲ್ಲ ರೈತರ ಪರ ಯೋಜನೆ ಜಾರಿಗೆ ತರಲು ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಬೇಕಾಯಿತು ಎಂದರು. ರೈತರ ಪರವಾಗಿ ಸಾಕಷ್ಟು ಯೋಜನೆಗಳ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದರಲ್ಲೂ ಪ್ರತಿ ವರ್ಷ 10 ಸಾವಿರ ರೂ ರೈತರಿಗೆ ನೀಡುತ್ತಿದೆ. ಈಗ ಎರಡನೇ ಕಂತು ಸಹ ಪ್ರಾರಂಭವಾಗುತ್ತಿದೆ ಎಂದರು. ಚಿಕ್ಕಮೂಲಗೂಡು ಗ್ರಾಮವನ್ನು ನಾನು ಮರೆಯಲಾರೆ ನಾನು ಲೋಕಸಭೆ ಸದಸ್ಯ ಚುನಾವಣೆಗೆ ನಿಂತಿದ್ದಾಗ ಎರಡು ಬೂತ್ ನಲ್ಲೂ ಲೀಡ್ ನೀಡಿದೆ. ನಾನು ಮತ್ತೆ ಚುನಾವಣೆಗೆ ಸ್ವರ್ಧಿಸುತ್ತೇನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು. ಇನ್ನೂ ಇದೇ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿ ಮೂಲಕ ರೈತರಿಗೆ ಯೋಜನೆ ಬಿತ್ತಿಪತ್ರ ನೀಡಲಾಯಿತು. ಕಾರ್ಯಕ್ರಮದ ಜಿಲ್ಲಾ ರೈತ ಮೋಚಾ ಅಧ್ಯಕ್ಷ ಜೋಗಿಗೌಡ, ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಿರುಗಾವಲು ಮಂಡಲ ಅಧ್ಯಕ್ಷ ಅನಿಲ್ , ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರಾದ, ಡಾ.ಯಮದೂರು ಸಿದ್ದರಾಜು, ತಾಲ್ಲೂಕು ಅಧ್ಯಕ್ಷ ದೇವರಾಜು, ಜಿಲ್ಲಾ ಸಂಚಾಲಕ ಬಡ್ಡಿಹನುಮಂತ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ದೇವರಾಜು, ಜಿಲ್ಲಾವಕ್ತಾರ ಚಿಕ್ಕಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಣಿಬಸವರಾಜು, ತಾಲ್ಲೂಕು ಪ್ರಧಾನಕಾರ್ಯದರ್ಶಿ ಕೆ.ಸಿ ನಾಗೇಗೌಡ, ಗ್ರಾಮದ ಮುಖಂಡ ಪುಟ್ಟಬುದ್ದಿ, ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment