ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ! 2,35200 ಮೌಲ್ಯದ ಬೈಕ್ ಗಳು ವಶ..

ಹುಬ್ಬಳ್ಳಿ: ಅಂತರ ಜಿಲ್ಲಾ ಬೈಕ್ ಕಳ್ಳ ಹಾಗೂ ಅಂಗಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನನ್ನು ಹಿಡಿಯುವಲ್ಲಿ ಉಪನಗರ ಪೋಲಿಸ್ ಠಾಣೆಯ ಪೋಲಿಸರುಯ ಯಶಸ್ವಿಯಾಗಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ ಬಳಿ ಕಳ್ಳ ಟೋಪಗಿ ವಿಜಯನನ್ನು ಬಂಧಿಸಿ ಉಪನಗರ ಪೊಲೀಸ್ ಠಾಣೆಯ ಎರಡು ಪ್ರಕರಣ ಧಾರವಾಡದ ವಿದ್ಯಾಗಿರಿ, ಹಳೇ ಹುಬ್ಬಳ್ಳಿಯ ಹಾಗೂ ಲೋಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಇನ್ನು ಬಂಧಿತ ಕಳ್ಳ ಟೋಪಗಿ ವಿಜಯ ಬಳಿಯಿದ್ದ ವಿವಿಧ ಕಂಪನಿಯ ಐದು ಬೈಕ್ ಹಾಗೂ ನಗದು ಹಣ ಸೇರಿಸಿ ಒಟ್ಟು 2,35200 ರೂಪಾಯಿ ಮೌಲ್ಯದ ಬೈಕ್ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಇನ್ನು ಪೊಲೀಸ್ ಆಯುಕ್ತ ಲಾಬೂರಾಮ್ ಅವರ ಮಾರ್ಗದರ್ಶನದ ಮೇರೆಗೆ ಉಪನಗರ ಪೊಲೀಸ್ ಠಾಣೆಯ ಪಿಐ ಎಸ್ ಕೆ ಹೊಳೆನ್ನವರ,ಪಿ ಎಸ್ ಐ ಸೀತಾರಾಮ, ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದಾರೆ. ಈ ಕುರಿತು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಕುರಿತು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment