ಕಾಲು ಜಾರಿ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು..!

ಆನೇಕಲ್: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲ್ಲೂಕಿನ ನಾಯನಹಳ್ಳಿಯಲ್ಲಿ ನಡೆದಿದೆ. 33 ವರ್ಷದ ಮುನಿರಾಜು ಎಂಬಾತ ವೆಂಕಟಾಚಲ ಗೌಡ ಎಂಬುವವರ ತೋಟದಲ್ಲಿ ತೋಟದ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಹೋದಾಗ ಈ ಘಟನೆ ಸಂಭವಿಸಿದ್ದು, ಈಜಲು ಬಾರದೆ ಕೃಷಿ ಹೊಂಡದಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಬೆಳಗ್ಗೆ ದಿನನಿತ್ಯದ ಕೆಲಸಕ್ಕೆ ಸಾರ್ವಜನಿಕರು ತೆರಳಿದ್ದು ಮುನಿರಾಜುನ ಚಪ್ಪಳಿ ಹೊಂಡದ ಮೇಲೆ ಇರುವುದನ್ನು ಕಂಡು ಸ್ಥಳಿಯರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ಕೃಷಿ ಹೊಂಡದಲ್ಲಿನ ನೀರು ಖಾಲಿ ಮಾಡಿ ಮೃತ ದೇಹವನ್ನು ಹೊರತೆಗೆದು ಶವಾಗಾರಕ್ಕೆ ಕಳುಹಿಸಿದ್ದಾರೆ. ಬೆಳಿಗ್ಗೆ ಚಪ್ಪಲಿ ಕೃಷಿ ಹೊಂಡದ ಮೇಲೆ ಇರುವುದು ನೋಡಿ ಘಟನೆ ಬೆಳಕಿಗೆ.

ವರದಿ- ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Please follow and like us:

Related posts

Leave a Comment