ಖಾಲಿ ಕ್ವಾಟರ್ ಬಾಟಲಿಯಲ್ಲಿ ಅರಳಿದ ಕಲೆ..!

ಖಾಲಿ ಕ್ವಾಟರ್ ಬಾಟಲಿ ಹಂಗೆ ಲೈಫ್ ಅನ್ನೋ ಸಾಲುಗಳು ನಿಜಕ್ಕೂ ಸತ್ಯ ಕಣ್ರೀ.. ಯಾಕೆಂದ್ರೆ ಕ್ವಾಟರ್ ಖಾಲಿ ಅದ್ಮೇಲೆ ಏನ್ ಮಾಡ್ತೀವಿ ಹೇಳಿ, ಅದನ್ನ ಕಸದ ಬುಟ್ಟಿಗೊ ಇಲ್ಲ ತೂಕಕ್ಕೆ ಹಾಕ್ತಿವಿ ಆದ್ರೆ ಇಲ್ಲೊಬ್ಬರು ಅದೇ ಕ್ವಾಟರ್ ಬಾಟಲಿನಿಂದ ಲೈಫ್ ಅನ್ನ ಕಂಡುಕೊಂಡಿದ್ದಾರೆ ಅದು ಹೇಗೆ ಅಂತೀರಾ ಈ ಕ್ಟಾಟರ್ ಬಾಟಲ್ ಸ್ಟೋರಿ ನೋಡಿ.

ಖಾಲಿ ಕ್ವಾಟರ್ ಬಾಟಲಿ ತರ ಲೈಫ್ ಇದ್ದೀಯೋ ಇಲ್ವೋ ಗೊತ್ತಿಲ್ಲ ಆದ್ರೆ ಈ ಕ್ವಾಟರ್ ಬಾಟಲು ಒಬ್ಬರಿಗೆ ಜೀವನ ನೀಡಿದೆ.ಅಂದಹಾಗೇ ಇದು ಕ್ರಿಯೇಟಿವ್ ವಲ್ಡ್ಎಲ್ಲರೂ ಎಲ್ಲವನ್ನು ಕ್ರಿಯೇಟಿವ್ ಹಾಗೇ ಯೋಚನೆ ಮಾಡ್ತಾರೆ. ಜೊತೆಗೆ ಕ್ರಿಯೇಟಿವ್ ವರ್ಕ್ಗಳನ್ನು ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ ಅಂತವರಲ್ಲಿ ಗಜೇಂದ್ರ ಕೂಡ ಒಬ್ಬರು.ಬಾಟಲಿಗಳನ್ನ ಬಳಸಿ ಅದ್ರಲ್ಲಿ ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳನ್ನ ರೆಡಿ ಮಾಡಿ ಇದ್ರ ಮೂಲಕ ಜೀವನ ಕಂಡುಕೊಂಡಿದ್ದಾರೆ. ಅಂದಹಾಗೇ ಗಜೇಂದ್ರ ಬಾಟಲಿಗಳಿಂದ ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ.. ಗಡಿಯಾರ, ಲ್ಯಾಂಪ್ಗಳು, ಗಾರ್ಡನಿ ಬಾಟಲ್, ಟ್ರೇ , ವಾಸ್ಗಳು ಸೇರಿದಂತೆ ಇತರೆ ಗೃಹಾಲಂಕಾರ ವಸ್ತುಗಳನ್ನ ರೆಡಿ ಮಾಡ್ತಾರೆ. ಇನ್ನು ಇವ್ರು ರೆಡಿ ಮಾಡೊ ಡಿಫರೆಂಟ್ ಬಾಟಲ್ ವರ್ಕ್ ಗಳನ್ನಾ ಜನ್ರು ಹುಡುಕಿಕೊಂಡು ಗಜೇಂದ್ರ ಅವ್ರ ಬಳಿ ಬರ್ತಾರಂತೆ. ಬಂದು ಬಾಟಲಿ ಕೊಟ್ಟು ಖಾಲಿ ಬಾಟಲ್ ಮೇಲೆ ಡಿಫರೆಂಟ್ ಡಿಸೈಂನ್ಸ್ ಮಾಡುವುದಕ್ಕೆ ಹೇಳಿಹೋಗ್ತಾರಂತೆ. ಇನ್ನಾ ಇಷ್ಟು ಡಿಫರೆಂಟ್ ಆಗಿರೊ ಬಾಟಲ್ಗಳ ಬೆಲೆ ಸುಮಾರು 250 ರೂಪಾಯಿಯಿಂದ ಹಿಡಿದು 2000 ರೂಪಾಯಿಯ ವರೆಗೂ ಇದೆಯಂತೆ.ಯಾವುದೇ ಒಂದು ಬಾಟಲ್ ಗೆ ಬೆಲೆ ನಿಗದಿ ಮಾಡುವ ಮೊದಲು ಆ ಬಾಟಲಿಯ ಡಿಸೈನ್ ಮೇಲೆ ದರವನ್ನ ನಿಗಧಿ ಮಾಡಲಾಗುತ್ತದೆ.. ಸುಮಾರು 12 ವರ್ಷದಿಂದ ಇಂತಹ ಖಾಲಿ ಬಾಟಲ್ಗಳಿಂದ ವಿಧವಿಧಾವದಂತಹ ಅಲಂಕಾರಿಕ ವಸ್ತುಗಳನ್ನು ಮಾಡಿಕೊಂಡು ಬಂದಿದ್ದಾರೆ.ಇತಾ ತಾನು ಮಾಡುವುದರ ಜೊತೆಗೆ ಇತರರಿಗು ಕೂಡ ತರಭೇತಿಯನ್ನ ನೀಡ್ತಾರೆ.ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಮಾಡಬಹುದಾದ ಅದೆಷ್ಟೋ ಕಲೆಗಳಿವೆ. ಆದರೆ ಅದಕ್ಕೆ ಒಂದಿಷ್ಟು ಆಸಕ್ತಿ, ಕ್ರಿಯೇಟಿವ್ ಮೈಂಡ್ ಇದ್ರೆ ಸಾಕು ಏನ್ ಬೇಕಾದ್ರೂ ಮಾಡಬಹುದು ಅಲ್ವಾ.ಅದೇನೆ ಹೇಳಿ ಕಾಲ ಬದಲಾದಂತೆ, ನಾವು ಬದಲಾಗ್ತಾ ಇರುತ್ತಿವಿ. ಜೊತೆಗೆ ನಾವು ಬೇಡ ಅಂತ ಹೇಳಿ ಬಿಸಾಕಿದ್ದ ವಸ್ತುಗಳನ್ನು ಬಳಸಿ ಹೇಗೆಲ್ಲ ಅಲಂಕಾರಿಕ ವಸ್ತುಗಳನ್ನೂ ಮಾಡಬಹುದು ಅನ್ನೋಕ್ಕೆ ಇವ್ರೇ ಸಾಕ್ಷಿ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment