ಪಾಮನಕಲ್ಲೂರು: ವಾಲ್ಮೀಕಿ ಜಯಂತಿ ಆಚರಣೆ; ವಿವಿಧ ಸಮುದಾಯಗಳ ಮುಖಂಡರು ಭಾಗಿ.!

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಗ್ರಾಮದ ರಾಯಚೂರು – ಲಿಂಗಸುಗೂರು ಮುಖ್ಯ ರಸ್ತೆಯ ಬದಿ ಯಲ್ಲಿರುವ ಮಹರ್ಷಿ ವಾಲ್ಮೀಕಿ ನಾಮ ಫಲಕಕ್ಕೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಜಾತಿ, ಧರ್ಮದ ಭೇದ ಭಾವ ಮರೆತು ಗ್ರಾಮದ ವಿವಿಧ ಸಮುದಾಯಗಳ ಮುಖಂಡರು ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವೈಕ್ಯತೆಯನ್ನು ಪ್ರದರ್ಶಿಸಿದರು.ಇದೇ ವೇಳೆ ಗ್ರಾಮದ ಮೇನ್ ರೋಡ್ ಸರ್ಕಲ್ ಹತ್ತಿರವಿರುವ ಒಳಬಳ್ಳಾರಿ ಚನ್ನಬಸವೇಶ್ವರ, ಅಂಬಿಗರ ಚೌಡಯ್ಯ, ಡಾ.ಬಿ.ಆರ್ ಅಂಬೇಡ್ಕರ್, ಕನಕದಾಸರ ನಾಮ ಫಲಕಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು.ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಸಂತೋಷ ರಾಜ್ ಗುರು, ಗ್ರಾಮಸ್ಥರಾದ ಅಮರೇಶ್ ಕಲ್ಲೂರು, ಮಲ್ಲೇಶಪ್ಪ ಬಳಿ, ಮಹಮ್ಮದ್ ರಫಿ, ಮಲ್ಲಿಕಾರ್ಜುನ ನಾಲ್ವಾರಕರ್, ಶಶಿಧರ್ ಜಂಗಮರಹಳ್ಳಿ, ಅಯ್ಯಪ್ಪ ನಾಯಕ ಯದ್ದಲದೊಡ್ಡಿ, ಅಯ್ಯಪ್ಪ ತಳವಾರ್ ವಾಟರ್ ಮ್ಯಾನ್, ತಿಮ್ಮಯ್ಯ ಯದ್ದಲದೊಡ್ಡಿ, ಸಣ್ಣ ದುರುಗಪ್ಪ ಜೋಳದರಾಶಿ, ಬಸವರಾಜ್ ಕುರುಡಿ, ಮಲ್ಲಪ್ಪ ತಳವಾರ್, ಮರೇಪ್ಪ ತಳವಾರ್, ರಾಜ್ ಗಂಟ್ಲಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಯಂಕಪ್ಪ ಯದ್ದಲದೊಡ್ಡಿ, ತಿಪ್ಪಣ್ಣ ಯದ್ದಲದೊಡ್ಡಿ, ಶ್ರೀನಿವಾಸ್ ಸಾನಬಾಳ್, ಅಮರಯ್ಯ ಸ್ವಾಮಿ ಮಠದ್, ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.

Please follow and like us:

Related posts

Leave a Comment