ಕೊರೊನಾ ಅತಿವೃಷ್ಟಿ ನಡುವೆಯೂ ಅನ್ನದಾತನ ಸೀಗೆ ಹುಣ್ಣಿಮೆ ಸಂಭ್ರಮ…!!

ಹುಬ್ಬಳ್ಳಿ: ಒಂದು ಕಡೆ ಮಳೆ ಸೃಷ್ಟಿಸಿದ ಅವಾಂತರ ಮತ್ತೊಂದೆಡೆ ಕೊರೊನಾ ಎಂಬ ಮಹಾಮರಿ ಭೀತಿ ಇದರ ನಡುವೆಯೂ ರೈತ ಖುಷಿಯಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಳೆಯಿಂದ ಬೆಳೆ ಕಳೆದು ಕೊಂಡಿರುವ ಅನ್ನದಾತ ಇಂದು ಭೂಮಿತಾಯಿಗೆ ಪೂಜೆ ಸಲ್ಲಿಸುವ ದೃಶ್ಯಗಳು ಜಿಲ್ಲೆಯಲ್ಲಿ ಕಂಡು ಬಂತು.ದಸರಾ ಮತ್ತು ದೀಪಾವಳಿ ನಮ್ಮ ಹಿಂದೂ ಧರ್ಮದಲ್ಲಿ ಆಚರಿಸುವ ಅತಿ ದೊಡ್ಡ ಹಬ್ಬಗಳು. ಈ ಹಬ್ಬಗಳ ನಡುವೆ ಬಂದು ಹೊಗುವ ದೊಡ್ಡ ಹಬ್ಬವೇ ಭೂಮಿ ಹುಣ್ಣಿಮೆ, ನಮ್ಮ ಸಂಸ್ಕೃತಿಯಲ್ಲಿ ತುಂಬು ಗರ್ಭಿಣಿಗೆ ಸೀಮಂತ ಮಾಡುವುದು ಒಂದು ಸಂಪ್ರದಾಯ. ಶ್ರಾವಣ ಮಾಸದ ಪೂರ್ವದಲ್ಲಿ ಸುರಿಯುವ ಮುಂಗಾರು ಮಳೆಯ ಸಂದರ್ಭದಲ್ಲಿ, ಬಿತ್ತಿದ ಬೀಜ ಮೊಳಕೆ ಒಡೆದು ಆಶ್ವೀಜ ಕೊನೆಯಾರ್ದದಲ್ಲಿ, ಬೆಳೆದ ಪೈರು ರೈತನ ಮೊಗದಲ್ಲಿ ಮಂದಹಾಸ ಬೀರಿಸುತ್ತದೆ. ಆಗ ಭೂಮಿತಾಯಿ ತುಂಬು ಗರ್ಭಿಣಿಯಂತೆ ಕಂಗೊಳಿಸುತ್ತಾಳೆ.ಆಶ್ವೀಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಲ್ಲಿ, ಭೂಮಿ ತಾಯಿಗೆ ಸೀಮಂತ ಮಾಡುವ ವಿಶಿಷ್ಟ ಸಂಪ್ರದಾಯವೇ ಸೀಗೆ ಹುಣ್ಣಿಮೆ. ಅತಿವೃಷ್ಟಿ ಹಾಗೂ ಕೊರೊನಾ ನಡುವೆಯೂ ರೈತರ ಸಂಭ್ರಮ ನೋಡುವುದೇ ಒಂದು ತರಹ ಖುಷಿ ಈ ಹಬ್ಬದಲ್ಲಿ ಭೂಮಿ ತಾಯಿಗೆ ಹೊಸ ಸೀರೆ ಉಡಿಸಿ, ವಿವಿಧ ರೀತಿಯ ತಿನಿಸುಗಳನ್ನು ಮಾಡಿ ನೈವೇಧ್ಯೆ ಇಟ್ಟು ಪೂಜೆ ಮಾಡುವುದು ವಿಶೇಷ ಈ ಹಬ್ಬದಲ್ಲಿ ಐದು ರೀತಿಯ ತರಕಾರಿ ಪಲ್ಯ ಅದರಲ್ಲೂ ಬದನೆಕಾಯಿ ಮತ್ತು ಪುಂಡಿಸೊಪ್ಪಿನ ಪಲ್ಯ ಕಡ್ಡಾಯವಾಗಿ ಮಾಡುತ್ತಾರೆ. ಹೀಗೆ ಹಲವಾರು ರೀತಿಯ ತಿನಿಸು ಮಾಡಿಕೊಂಡು ಮನೆಯವರೆಲ್ಲರೂ, ಎತ್ತಿನ ಗಾಡಿ ಅಥವಾ ಟ್ಯಾಕ್ಟರ್ ಮೇಲೆ ತಮ್ಮ ಹೊಲಕ್ಕೆ ಬಂದು ಭೂಮಿತಾಯಿಯ ಪೂಜೆ ಮಾಡುವ ಮೂಲಕ ಎಂತ ಕಷ್ಟ ಬಂದರೂ ಭೂಮಿ ತಾಯಿಯನ್ನು ಅನ್ನದಾತ ಮರೆಯುವುದಿಲ್ಲ.ಒಟ್ಟಿನಲ್ಲಿ ಅತಿವೃಷ್ಟಿ ಹಾಗೂ ಕೊರೊನಾ ನಡುವೆಯೂ ಅನ್ನದಾತ ಎಷ್ಟೆ ಕಷ್ಟ ಬಂದ್ರು ಸಹ ಸಂಪ್ರದಾಯ ಬಿಟ್ಟು ಕೊಡವುದಿಲ್ಲ,ಅನ್ನೋಕ್ಕೆ ಈ ಸೀಗೆ ಹುಣ್ಣುಮೆ ಉದಾಹರಣೆ.

ವರದಿ- ರಾಜು ಮುದಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment